ಮೂಡಿಗೆರೆ ತಾಲೂಕಿನ ಪರಿಶಿಷ್ಟ ವರ್ಗದವರು ಉತ್ಪಾದಿಸುವ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಸಮಗ್ರ ಅಭಿವೃದ್ದಿ ಯೋಜನೆಯಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯ ನಿರ್ವಹಿಸಿ ಬುಡಕಟ್ಟು ಗಿರಿಜನ ಕೃಷಿಕರ ಅಭಿವೃದ್ಧಿ ಗೆ, ಅವರ ಆರ್ಥಿಕ ಏಳಿಗೆಗೆ ಶ್ರಮಿಸಿ ಈಗ ಅನ್ಯ ಕಾರ್ಯ ನಿಮಿತ್ತ ಯೋಜನೆಯ ಕಾರ್ಯದಿಂದ ನಿರ್ಗಮಿಸಿರುವ ತಾಂತ್ರಿಕ ಸಹಾಯಕರಾದ ರಶ್ಮಿ ಎನ್ ಅವರನ್ನು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘ ಮತ್ತು ಧನಲಕ್ಷ್ಮಿ ಗಿರಿಜನ ಕಾಫಿ ಉತ್ಪಾದಕರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.



