ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ದುರ್ಗಾಪೂಜಾ ಮಹೋತ್ಸವದ ಅಂಗವಾಗಿ ಕಳಸ ದುರ್ಗಾ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಸಹ ಪ್ರಯೋಜಕತ್ವದಲ್ಲಿ ಮಂಗಳವಾರ ನಡೆದ ಪುತ್ತೂರು ಜಗದೀಶ್ ಆಚಾರ್ಯ ಇವರ ಸಂಗೀತ ಗಾನ ಸಂಭ್ರಮ ಕಳಸದ ಜನರ ಮನ ರಂಜಿಸಿದೆ.

ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ, ಕಲರ್ಸ್ ಕನ್ನಡ ಖ್ಯಾತಿಯ ಕರಾವಳಿ ಕರ್ನಾಟಕ ಸಂಗೀತ ಲೋಕದ ಸ್ವರ ಮಾಂತ್ರಿಕ ಜಗದೀಶ್ ಆಚಾರ್ಯ ಸುಮಾರು ಎರಡೂ ವರೆ ಗಂಟೆಗಳ ಕಾಲ ಭಕ್ತಿಗೀತೆ, ಜನಪದಗೀತೆ, ಭಾವ ಗೀತೆಗಳ ಮುಖಾಂತರ ನೆರೆದಿದ್ದ ನೂರಾರು ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದರು. ಅಯ್ಯಪ್ಪ ಸ್ವಾಮಿಯ ಹಾಡುಗಳಿಗೆ ನೆರೆದಿದ್ದ ಅಯ್ಯಪ್ಪ ಭಕ್ತರು ಶಿಸ್ತು ಬದ್ದವಾಗಿ ಹೆಜ್ಜೆ ಹಾಕಿ ಕುಣಿದಾಡಿದರು.

ಅಚ್ಚು ಕಟ್ಟಾಗಿ, ಶಿಸ್ತು ಬದ್ಧವಾಗಿ ನಡೆದ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಸಂಗೀತ ಪ್ರೇಮಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಭಕ್ತ ವೃಂದ ಮತ್ತು ಶ್ರೀ ವಿಶ್ವಕರ್ಮ ಸಮಾಜದಿಂದ ಜಗದೀಶ್ ಆಚಾರ್ಯ ಅವರನ್ನು ಗೌರವಿಸಿದರು.

