ಕಳಸ ಲೈವ್ ವರದಿ
ಇದೇ 8 ರಂದು ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಮಧ್ಯಾಹ್ನ 2.39 ರಿಂದ ಸಂಜೆ 6.19 ನಡೆಯಲಿದ್ದು ಹೊರನಾಡು ಅನ್ನಪೂಣೇಶ್ವರಿ ದೇಗುಲ ಮತ್ತು ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಆ ದಿನದ ಪ್ರಸಾದ ಭೋಜನ ಮತ್ತು ಪೂಜೆಯಲ್ಲಿ ಕೆಲ ಬದಲಾವಣೆ ಇರಲಿದೆ .
ಹೊರನಾಡಿನಲ್ಲಿ ಮಹಾಮಂಗಳಾರತಿ ಮದ್ಯಾಹ್ನ 12.30ಗೆ ನೆರವೇರಲಿದ್ದು, ಮಧ್ಯಾಹ್ನ ಪ್ರಸಾದ ಭೋಜನ ಇರುವುದಿಲ್ಲ. ರಾತ್ರಿ ಗ್ರಹಣ ಮೋಕ್ಷ ಕಾಲದ ನಂತರ ಶುದ್ಧಿ ಕಾರ್ಯ ನಡೆದ ಮೇಲೆ ಎಂದಿನಂತೆ ಪೂಜೆ ಮತ್ತು ರಾತ್ರಿ ಪ್ರಸಾದ ಭೊಜನ ಭಕ್ತರು ಈ ಬದಲಾವಣೆ ಗಮನಿಸಬೇಕು ಎಂದು ದೇವಸ್ಥಾನದ ಧರ್ಮಕರ್ತರದ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಕಲಶೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನ ಇರುವುದಿಲ್ಲ. ಗ್ರಹಣ ಸಮಯದಲ್ಲಿ ಭಕ್ತಾಧಿಗಳಿಗೆ ಯಾವುದೇ ಸೇವೆಗಳು ಇರೋದಿಲ್ಲ. ಗ್ರಹಣ ಮುಗಿದು ಶುದ್ಧಿ ಕಾರ್ಯ ನಡೆದ ನಂತರ ಎಂದಿನಂತೆ ಪೂಜೆ ಪ್ರಸಾದ ವಿತರಣೆ ಇರುತ್ತದೆ.



