ಕಳಸ ಲೈವ್ ವರದಿ
ಬಾಳೆಹೊನ್ನೂರಿನಲ್ಲಿ 2022-23ನೇ ಸಾಲಿನ ಮೂರನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಕಳಸ ತಾಲೂಕಿನಾಧ್ಯಂತ ದಿನಾಂಕ 24.11.2022(ಗುರುವಾರ) ರಂದು ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಅಂದು ಕಳಸ ಸೇರಿದಂತೆ ಬಾಳೆಹೊಳೆ, ಹೊರನಾಡು, ಸಂಸೆ, ಹಿರೇಬೈಲು, ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.




