ಕಳಸ ಲೈವ್ ವರದಿ
ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಸುಗುಣಿ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಶಂಕರೇಗೌಡ(54) ಎಂದು ಗುರುತಿಸಲಾಗಿದೆ.
ತನಗಿದ್ದ ನಾಲ್ಕು ಎಕರೆ ಅಡಕೆ ತೋಟಕ್ಕೆ ಎಲೆ ಚುಕ್ಕಿ ರೋಗ ತಗುಲಿತ್ತು. ಇದರಿಂದ ಮನೆಯಲ್ಲಿ ಪ್ರತಿನಿತ್ಯ ಬೇಸರ ವ್ಯಕ್ತ ಪಡಿಸಿದ್ದರು. ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದ ಶಂಕರೇಗೌಡರಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.
ಸಂಜೆಯ ವೇಳೆಗೆ ತನ್ನ ತೋಟದ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿ ಇದ್ದಾರೆ.
