ಕಳಸ ಲೈವ್
ಕಳಸ ತಾಲೂಕಿನ ಹಿರೇಬೈಲಿನಿಂದ ಇಡಕಣಿ ಹೋಗುವ ರಸ್ತೆಯ ಕಂಕೋಡು ಹತ್ತಿರ ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿ ವ್ಯಕ್ತಿಗಳಿಬ್ಬರಿಗೆ ಗಾಯವಾದ ಘಟನೆ ಗುರುವಾರ ಸಂಜೆ ನಡೆದಿದೆ.
ಇಡಕಣಿಯ ಚಂದ್ರರಾಜಯ್ಯ ಮತ್ತು ಅವರ ಮಗ ಉದಯ ತಮ್ಮ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಂಕೋಡು ಸಮಿಪ ಕಾಡುಕೋಣವೊಂದು ದಾಳಿ ಮಾಡಿದೆ.ಈ ಸಂದರ್ಭದಲ್ಲಿ ಅಪ್ಪ ಮಗ ಇಬ್ಬರಿಗೂ ಗಾಯಗಳಾಗಿದೆ. ಹಾಗೂ ಚಲಿಸುತ್ತಿದ್ದ ಬೈಕ್ ಜಖಂ ಗೊಂಡಿದೆ.
ಕುಡಲೇ ಅವರನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಲಾಗಿದೆ.





