ಕಳಸ ಲೈವ್ ವರದಿ
ಸಂಸೆ ಗ್ರಾಮದ ಶುಂಠಿ ಕುಂಬ್ರಿ ಎಂಬಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಶೌರ್ಯ ತಂಡದ ಸ್ವಯಂಸೇವಕ ಸುಧಾಕರ್ ಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟರು.

ಸುಮಾರು 15 ದಿನಗಳಿಂದ ಶುಂಠಿಕುಂಬ್ರಿಯಲ್ಲಿ ಈ ಬೃಹತ್ ಗಾತ್ರದ ಹೆಬ್ಬಾವು ಬೀಡು ಬಿಟ್ಟು ಊರಿನ ಜನರಲ್ಲಿ ಗಾಬರಿ ಮೂಡಿಸಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೂ ತಂದಿದ್ದರು. 15ದಿನ ಕಳೆದರು ಯಾರು ಸ್ಪಂದಿಸದೆ ಇರುವುದನ್ನು ಗಮನಿಸಿ ನಂತರ ಗ್ರಾಮಸ್ಥರು ಶೌರ್ಯ ತಂಡದ ಗಮನಕ್ಕೆ ತಂದರು.

ತಕ್ಷಣ ಸ್ಪಂಧಿಸಿದ ಸ್ವಯಂಸೇವಕರಾದ ಸುಧಾಕರ್, ಗ್ರಾಮದ ಯುವಕರಾದ ರವೀಶ್, ಸಚಿನ್, ಅರಣ್ಯ ಇಲಾಖೆಯ ಗಮನಕ್ಕೆ ತಂದು ಹೆಬ್ಬಾವನ್ನು ಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರಪ್ಪ, ಲೋಕಪ್ಪ, ಲಕ್ಷ್ಮಣಗೌಡ, ಹಾಗೂ ಅರಣ್ಯ ಇಲಾಖೆಯ ಮಂಜುನಾಥ್ ನಾಯಕ್ ಇದ್ದರು.


