ಕಳಸ ಲೈವ್ ವರದಿ
ಗ್ರಾ.ಪಂ ನೌಕರರ ಬೇಡಿಕೆ ಈಡೇರಿಕೆಗೆ ಬೆಳಗಾವಿಯ ಅದಿವೇಶನದ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಳಸ ತಾಲೂಕಿನ ಆರು ಗ್ರಾ.ಪಂ ನೌಕರರು ಭಾನುವಾರ ಸಂಜೆ ಬೆಳಗಾವಿಗೆ ಪ್ರಯಾಣ ಬೆಳೆಸಿದರು.
ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಶ್ರೇಯೋಭಿವೃದ್ದಿ ಸಂಘದಿಂದ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಬೆಳಗಾವಿಯಲ್ಲಿ ಸೋಮವಾರ ನಡೆಯುವ ಬೃಹತ್ ಹೋರಾಟಕ್ಕೆ ಬೆಂಬಲ ನೀಡಲು ಆರು ಗ್ರಾ.ಪಂ ಯ ಒಟ್ಟು 12 ಜನ ನೌಕರರು ಪ್ರಯಾಣ ಬೆಳೆಸಿದ್ದಾರೆ.





