ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಶಲಕ್ಷ ಗಿಡಗಳ ನಾಟಿ ಮತ್ತು ಕರ್ನಾಟಕ ಸರಕಾರ ಅರಣ್ಯ ಇಲಾಖೆಯ ಕೋಟಿ ವೃಕ್ಷ ಆಂದೋಲನ ಪ್ರಯುಕ್ತ ಕಳಸ ತಾಲೂಕು ಕಳಸ ಎ ವಲಯದ ವಿಪತ್ತು ನಿರ್ವಹಣಾ ಘಟಕ ಮತ್ತು ಅರಣ್ಯ ಇಲಾಖೆ ಮತ್ತು ಯಡೂರು ಒಕ್ಕೂಟದ ಸಹಯೋಗದೊಂದಿಗೆ ಭಾನುವಾರ ಯಡೂರು ಗ್ರಾಮದ ಕೆರೆಮನೆ ಅರಣ್ಯ ಗುಡ್ಡದಲ್ಲಿ ಸುಮಾರು 300 ಹಣ್ಣು ಹಂಪಲು ಗಿಡ ಗಳನ್ನು ನಾಟಿ ಮಾಡಲಾಯಿತು.

ಈ ಒಂದು ಸೇವಾ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಕ್ಯಾಪ್ಟನ್ ಅಜಿತ್, ಸಂಯೋಜಕರಾದ ಸುದರ್ಶನ್, ಸದಸ್ಯರುಗಳಾದ ಜಗದೀಶ್, ರವಿ ಶೆಟ್ಟಿ, ಪ್ರಶಾಂತ್ ಹಾಗೂ ಒಕ್ಕೂಟದ ಸದಸ್ಯರುಗಳು, ವಲಯದ ಮೇಲ್ವಿಚಾರಕರು ಶ್ರೀನಿವಾಸ್, ಅರಣ್ಯ ಅಧಿಕಾರಿಗಳು ಹಾಗೂ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀನಾಥ್ ಪಾಲ್ಗೊಂಡಿದ್ದರು.


