



ಕಳಸ ಲೈವ್ ವರದಿ
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಮಂಡಳಿಯ ಸದಸ್ಯೆ ಶ್ರೀಮತಿ ಸುಚಿತಗೆ ಸೀಮಂತ ಶಾಸ್ತ್ರ ಮಾಡಿ ಗಮನ ಸೆಳೆದರು.
ಗರ್ಭಿಣಿ ಸುಚಿತಾಗೆ ಮಂಡಳಿಯ ಎಲ್ಲಾ ಮುತೈದೆಯರು ಸೇರಿ ಹಸಿರು ಬಳೆ ತೊಡಿಸಿ, ಹೂ, ಹಣ್ಣು, ಸೀರೆ ಕೊಟ್ಟು ಮಡಿಲು ತುಂಬಿಸಿ ಎಲ್ಲಾ ಮಹಿಳೆಯರು ಹರಸಿದರು.
ಇದೇ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಉಷಾ ಹಾಗೂ ಮಿಲಿಟರಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ಈಗ ಕಳಸ ಮೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸವಣಿ ಇವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಜಯ ಸದಾನಂದ, ಮಂಡಳಿಯ ಸ್ಥಾಪಕ ಅಧ್ಯಕ್ಷೆ ಚಂಪಾ ಎಂ ರಾವ್, ಕಾರ್ಯದರ್ಶಿ ಅಮಿತ ವಿನಾಯಕ, ಉಪಾಧ್ಯಕ್ಷೆ ಉಷಾ ಕುಮಾರ್ ಇತರರು ಇದ್ದರು.


