ಕಳಸ ಲೈವ್ ವರದಿ
ಇತ್ತೀಚೆಗೆ ಬೆಂಗಳೂರಿನ ಯಲಹಂಕದ ಅಂಬೇಡ್ಕರ್ ಭವನದಲ್ಲಿ ನಡೆದ ದಕ್ಷಿಣ ವಲಯ ಟೀಕ್ವಾಂಟೋ ಚಾಂಪಿಯನ್ಶೀಪ್ನಲ್ಲಿ ಕಳಸದ ಡ್ರ್ಯಾಗನ್ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ತರಬೇತುದಾರರಾದ ಶ್ರೀಮತಿ ಶಕುಂತಲ ಮತ್ತು ಮಹಮ್ಮದ್ ನೌಮನ್ ಅವರ ಮಾರ್ಗದರ್ಶನದಲ್ಲಿ ಇಲ್ಲಿ 12 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 5 ಚಿನ್ನದ ಪದಕ, 9 ರಜತ ಪದಕ ಮತ್ತು 10 ಕಂಚಿನ ಪದಕಗಳನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗಳು ಆರ್ಯನ್, ಶ್ರೇಯಾ, ತೋಯ್ಬಾ, ಆಶಲ್, ಶಕುಂತಲ,
ಬೆಳ್ಳಿ ಪದಕ ಗೆದ್ದ ವಿದ್ಯಾರ್ಥಿಗಳು ಆರ್ಯನ್, ಅದ್ವಯ್ತ್ ಎಂ.ಬಿ, ಮಿಜ್ಬಾ, ಆಶಲ್, ಅದ್ವಯ್ತ್ ಕೆ.ಎಂ, ಅಕ್ಷಿತಾ, ಯಶ್ವಂತ್
ಕಂಚಿನ ಪದಕ ಗೆದ್ದ ವಿದ್ಯಾರ್ಥಿಗಳು ಶಮನ್ಯೂ, ಯಶ್ವಂತ್, ಪ್ರೇಕ್ಷಾ, ಅದ್ವಯ್ತ್ ಎಂ.ಬಿ, ಕೃಪಾ, ಅದ್ವಯ್ತ್ ಕೆ.ಎಂ