
ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ ನ ಅಧ್ಯಕ್ಷರಾಗಿ ರಜಿತ್ ಕೆಳಗೂರು ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ್ ಹೆಚ್.ಆರ್ ಆಯ್ಕೆಯಾಗಿದ್ದಾರೆ.
ಪದಗ್ರಹಣ ಕಾರ್ಯಕ್ರಮವು ಡಿಸೆಂಬರ್ 4ರ ಸೋಮವಾರದಂದು ಕಳಸ ಪ್ರಥಮ ದರ್ಜೆಯ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಸಾಪ ಕಳಸ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ನೆರವೇರಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಸಾಹಿತಿ ಡಾ.ಆಗುಂಬೆ ಗಣೇಶ್ ಹೆಗ್ಗಡೆ, ಡಾ.ಮೋಹನ್ ರಾಜಣ್ಣ, ಕೆ.ಕೆ.ಬಾಲಕೃಷ್ಣ ಭಟ್, ವಿನಯ ಕುಮಾರ್ ಶೆಟ್ಟಿ, ರಾಜೇಂದ್ರ ಹೆಬ್ಬಾರ್ ಹಿತ್ಲುಮಕ್ಕಿ, ಮಮ್ತಾಜ್ ಬೇಗಂ, ಶ್ರೀಮತಿ ಕೌಸ್ತುಭ ಎಂ.ಭಟ್, ಶೇಖರ್ ಶೆಟ್ಟಿ, ಕೃಷ್ಣಮೂರ್ತಿ ಜೋಯಿಸ್ ಇರಲಿದ್ದಾರೆ.
ಅಂದು ಜಾನಪದ ತಜ್ಞ ಹೆಚ್ ಎಲ್ ನಾಗೇಗೌಡರ ಬದುಕು ಬರಹ ವಿಚಾರ ಸಂಕಿರಣ ಹಾಗೂ ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಸಾಲಿನಮಕ್ಕಿ ಶ್ರೀ ಕೃಷ್ಣಮೂರ್ತಿ ಜೋಯಿಸ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ನೂತನ ಪಧಾದಿಕಾರಿಗಳಾಗಿ ಡಾ.ಮೋಹನ್ ರಾಜಣ್ಣ(ಗೌರವಾಧ್ಯಕ್ಷರು), ವಿನಯಕುಮಾರ್ ಶೆಟ್ಟಿ( ಗೌರವ ಸಲಹರಗಾರರು), ಉಪಾಧ್ಯಕ್ಷರಾಗಿ ಸರ್ವಜಿತ್, ಮೊಹಮ್ಮದ್ ಶಮೀರ್, ಸುನೀಲ್ ಮಸೀಗದ್ದೆ, ಸಹಕಾರ್ಯದರ್ಶಿಯಾಗಿ ಚಿಂತನ್ ಗೌಡ, ಕಾಂತಿ ಪೈ, ಸಂಘಟನಾ ಕಾರ್ಯದರ್ಶಿ ಆಶಾ ರಾಘವೇಂದ್ರ, ಸಂಚಾಲಕರಾಗಿ ನಿಖಿತಾ ಸಂತೋಷ್ ಜೈನ್, ಗಣೇಶ್.ಟಿ, ಪ್ರಿಯಾ ಗುರು ಪ್ರಸಾದ್, ನಗೀನಾ ಖಾದರ್, ಸಹ ಸಂಚಾಲಕರು ಪೂರ್ಣಿಮಾ ಪ್ರಮೋದ್, ಮಾರ್ಗದರ್ಶಕರು ಉದಯ್.ಕೆ ಇವರು ಆಯ್ಕೆಯಾಗಿದ್ದಾರೆ.