


ಕಳಸ ಲೈವ್ ವರದಿ
ಕಳಸದ ಕೆಪಿಎಸ್ ಪ್ರೌಢ ಶಾಲೆಯ ಆವರಣದಲ್ಲಿ ಇದೇ ತಿಂಗಳ 28ರಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನಡೆಯಲಿದೆ.
ಕಳಸದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನಡೆಯುತ್ತಿದ್ದು, ಇದರ ಪೂರ್ವಭಾವಿಯಂತೆ ಬುಧವಾರ ಶಾಲಾ ಸಭಾಂಗಣದಲ್ಲಿ ಪ್ರತಿಭಾ ಕಾರಂಜಿಯ ಲಾಂಛನ ಮತ್ತು ಕೆಪಿಎಸ್ ಪ್ರೌಢ ಶಾಲೆಯ ನೂತನ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ಪ್ರತಿಭಾ ಕಾರಂಜಿಯ ಲಾಂಛನವನ್ನು ಪತ್ರಕರ್ತ ಸುದೀಶ್ ಸುವರ್ಣ ವಿನ್ಯಾಸ ಗೊಳಿಸಿದ್ದು, ಶಾಲೆಯ ಲಾಂಛನವನ್ನು ಶಿಕ್ಷಕ ಸಲೀಂ ಜಾವೇದ್ ವಿನ್ಯಾಸ ಗೊಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್, ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಸ್ವಾಮಿ ಇತರರು ಇದ್ದರು.
