
ಕಳಸ ಲೈವ್ ವರದಿ
ವ್ಯಕ್ತಿಯೊರ್ವ ಸೌದೆ ತರಲು ಹೋಗಿ, ಭದ್ರಾ ನದಿಯಲ್ಲಿ ಬಿದ್ದು, ಮೃತಪಟ್ಟಿರುವ ಘಟನೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಬೀಡು ಎಂಬಲ್ಲಿ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿ ನೆಲ್ಲಿಬೀಡು ವಾಸಿ ಪೃಥ್ವಿರಾಜ್ (17)ಎಂದು ಗುರುತಿಸಲಾಗಿದೆ..
ಪ್ರಥ್ವಿರಾಜ್ ಬೆಂಗಳೂರಿನಲ್ಲಿ ಡಿಪ್ಲೋಮ ಮಾಡಿಕೊಂಡಿದ್ದು, ರಜೆ ಮೇಲೆ ನೆಲ್ಲಿಬೀಡಿಗೆ ಬಂದಿದ್ದ.ಶುಕ್ರವಾರ ಬೆಳಿಗ್ಗೆ ತನ್ನ ಸ್ನೇಹಿತನ ಜೊತೆ ಸೌದೆ ತರಲು ಹೋಗಿದ್ದಾನೆ.ಈ ಸಂದರ್ಭದಲ್ಲಿ ಕಾಲು ಜಾರಿ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದೇನೆ.ಸ್ಥಳಿಯ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲೆತ್ತಿ ಕಳಸ ಮರಣೋತ್ತರ ಪರೀಕ್ಷೆಗಾಗಿ ಕಳಸ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.