
ಕಳಸ ಲೈವ್ ವರದಿ
ಆಸರೆ ಫೌಂಡೇಶನ್(ರಿ) ಕಳಸ ವತಿಯಿಂದ ಇದೇ 26ರಂದು ಸಾರ್ವಜನಿಕ ಸೇವೆಗಾಗಿ ಕಳಸ ಪಟ್ಟಣಕ್ಕೆ ಆಂಬ್ಯಲೆನ್ಸ್ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ರವಿ ರೈ ಕಳಸ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಉಪಸ್ಥಿತಿ ಅವದೂತ ಶ್ರೀ ವಿನಯ ಗುರೂಜಿ ಇರಲಿದ್ದಾರೆ ಗೌರವ ಉಪಸ್ಥಿತಿಯಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟ ಕೊಪ್ಪ ಇದರ ಪ್ರಧಾನ ಕಾರ್ಯದರ್ಶಿ ಸುಧೀರ್ ಮುರೋಳಿ, ಕಳಸ ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಕೆ.ಕೆ.ಬಿ ಬಸ್ಸು ಮಾಲಿಕರಾದ ಕೆ.ಕೆ.ಬಾಲಕೃಷ್ಣ ಭಟ್, ಕೊಪ್ಪ ಮಲ್ನಾಡ್ ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ನುಗ್ಗಿ ಮಂಜುನಾಥ್, ವಿಜಯಕುಮಾರ್ ಕೋಡಿಯಾಲ್ ಬೈಲ್ ಇರಲಿದ್ದಾರೆ.
ಮನೋರಂಜನಾ ಕಾರ್ಯಕ್ರಮ ಅಂಗವಾಗಿ ಕಲಾ ಸಂಗಮ ಶಿವದೂತೆ ಗುಳಿಗೆ ತಂಡದಿಂದ ಮಣಿಕಂಠ ಮಹಿಮೆ ಅದ್ದೂರಿ ತುಳು ಪೌರಣಿಕ ನಾಟಕ ಇರಲಿದೆ ಎಂದು ಬಿ.ವಿ ರವಿರೈ ಕಳಸ ತಿಳಿಸಿದ್ದಾರೆ.



