


ಕಳಸ ಲೈವ್ ವರದಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕುಟುಂಬಸ್ಥರು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವಿಯ ದರ್ಶನ ಪಡೆದರು.
ತಾಯಿ, ಮಗ ಮ್ರಿನಾಲ್ ಹೆಬ್ಬಾಲ್ಕರ್, ಸೊಸೆ ಹಿತ ಹೆಬ್ಬಾಲ್ಕರ್, ಮೊಮ್ಮಗಳು ಆಯಿರಾ ಹೆಬ್ಬಾಲ್ಕರ್ ಸೇರಿದಂತೆ ಕುಟುಂಬದ ಹದಿನೈದು ಸದಸ್ಯರ ಜೊತೆ ಹೊರನಾಡು ದೇವಸ್ಥಾನಕ್ಕೆ ಬೇಟಿ ನೀಡಿದ ಸಚಿವೆ.ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ವಿಶೇಷವಾಗಿ ಸ್ವಾಗತಿಸಿದರು. ಅಲ್ಲದೆ ಕಳಸ ಕಲಶೇಶ್ವರ ದೇವಸ್ಥಾನ ಮತ್ತು ಹೊರನಾಡು ದೇವಸ್ಥಾನದ ಹಿನ್ನಲೆ ಮತ್ತು ಮಾಹಿತಿಯನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೊಮ್ಮಗಳು ಆಯಿರಾ ಗೆ ದೇವಸ್ಥಾನದಲ್ಲಿ ಅನ್ನಪ್ರಾಶಾನ ನೆರವೇರಿಸಲಾಯಿತು.
ಇದಕ್ಕಿಂತ ಮುಂಚಿತವಾಗಿ ಕಳಸದಲ್ಲಿರುವ ಶಾಸಕರ ಕಚೇರಿ ಬೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.
ಈ ಸಂಧರ್ಭದಲ್ಲಿ ಕಳಸ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಕಾಂಗ್ರೆಸ್ ಮುಖಂಡರಾದ ಹಿತ್ತಲಮಕ್ಕಿ ರಾಜೇಂದ್ರ, ಸುಧಾಕರ್, ವೀರೇಂದ್ರ, ಸಂಶುದ್ಧಿನ್ ಹೊರನಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಧುಕುಮಾರ್ ಇತರರು ಇದ್ದರು.
ಹೊರನಾಡಿನಲ್ಲಿ ಪೂಜೆ ಮುಗಿಸಿ ಅನ್ನ ಪ್ರಸಾದ ಭೋಜನ ಸ್ವೀಕರಿಸಿ ಶೃಂಗೇರಿಗೆ ಪ್ರಯಾಣ ಬೆಳೆಸಿದರು.


