
ಕಳಸ ಲೈವ್ ವರದಿ
ಈಗಿನ ಕಾಲಘಟ್ಟ ದಲ್ಲಿ ಮನುಷ್ಯ ತಮ್ಮ ಜೀವನ ಶೈಲಿ ಯಿಂದ ಅಧಿಕ ರಕ್ತ ದೋತ್ತಡ. ಮಧುಮೆಹ ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆ ಗಳನ್ನು ಹೊಂದಿರುತ್ತಾರೆಂದು ಕಳಸ ಮುಖ್ಯ ರಸ್ತೆಯಲ್ಲಿರುವ ಲಕ್ಸ್ಮಿ ಕ್ಲಿನಿಕ್ ನ ಡಾ. ಸಂತೋಷ್ ಹೇಳಿದರು.
ಅವರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಕಳಸ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅರೋಗ್ಯ ತಪಾಸಣೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸರು ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಗುಣ ಪಡಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಸ್ಐ ಬಾಬು ಎಸ್ ಆಗೇರ ವಹಿಸಿದ್ದರು.
ಆಸ್ಪತ್ರೆಯ ಸಿಬ್ಬಂದಿ ಚಂದ್ರಿಕಾ, ಎ ಎಸ್ ಐ. ಡಾ.ಸಿ.ಆರ್ ಮೋಹನ್ ಕುಮಾರ್ ಕಾರ್ಯಕ್ರಮ ದಲ್ಲಿ ಸ್ವಾಗತಿಸಿ ವಂದಿಸಿದರು.
ಸಿಬ್ಬಂದಿಗಳಾದ ಮುಖ್ಯ ಪೇದೆ ಜಯಕುಮಾರ್, ಕಾನ್ಸ್ಟೇಬಲ್ ಮಲ್ಲೇಶ್, ಶಿವಕುಮಾರ್, ಸಿದ್ದಪ್ಪ ಕರಂಡಿ ಮತ್ತು ಮಹಿಳಾ ಪೊಲೀಸ್ ಮನೋಜ ಇತರರು ಉಪಸ್ಥಿತರಿದ್ದರು.



