ಕಳಸ ಲೈವ್ ವರದಿ
ಡಾ|| ರಾಜ್ ಕನ್ನಡ ಸಂಘ ಮತ್ತು ಕರವೇ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಮಾ 17 ರಂದು ಪುನೀತ್ ರಾಜ್ ಕುಮಾರ್ 49 ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗುತ್ತಿದೆ ಎಂದು ಡಾ| ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ತಿಳಿಸಿದ್ದಾರೆ.
ಅಂದು ಸಂಜೆ ಸಂಘದ ಕಛೇರಿ ಮುಂಬಾಗ ಅನ್ನದಾನ ಮತ್ತು ಅರವಿಂದ ಆಚಾರ್ಯ ಇವರಿಂದ ಅಪ್ಪು ಕರೋಕೆ ಆರ್ಕೇಸ್ಟ್ರಾ ಇರಲಿದೆ ಎಂದು ತಿಳಿಸಿದ್ದಾರೆ.
