ಕಳಸ ಲೈವ್ ವರದಿ
ಕಳಸದ ಅಂಬಾ ತೀರ್ಥದಲ್ಲಿ ಭಾನುವಾರ ಸ್ನಾನಕ್ಕೆಂದು ಇಳಿದಿದ್ದ ಯುವಕ ನೀರು ಪಾಲಾಗಿದ್ದು ಯುವಕನ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.
ಮುಳುಗಿರುವ ಯುವಕ ಸ್ಥಳೀಯ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಸಾಗರ್ ( 19 ) ಎಂದು ಗುರುತಿಸಲಾಗಿದೆ.
ಭಾನುವಾರ ತೋಟಕ್ಕೆ ರಜಾ ಇದ್ದುದರಿಂದ ಅಂಬಾತೀರ್ಥದಲ್ಲಿ ಇಬ್ಬರು ಯುವಕರು ಸ್ನಾನಕ್ಕೆ ಇಳಿದಿದ್ದಾರೆ.ಈ ಸಂದರ್ಭದಲ್ಲಿ ಸಾಗರ್ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿತ್ತು.
ಭಾನುವಾರದಿಂದ ಅಂಬಾತೀರ್ಥದಲ್ಲಿ ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು.ಸೋಮವಾರ ಮುಳುಗು ತಜ್ಞ ಮಲ್ಪೆ ಈಶ್ವರ್ ಮೃತದೇಹವನ್ನು ಮೇಲಕೆತ್ತಿದ್ದಾರೆ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
