
ಕಳಸ ಲೈವ್ ವರದಿ
*ಕರ್ನಾಟಕ ಜಾನಪದ ಪರಿಷತ್* ಕಳಸ ತಾಲೂಕು ಇವರ ವತಿಯಿಂದ ಶುಕ್ರವಾರದಂದು ಭದ್ರಾ ನದಿಗೆ ಬಾಗಿನ ಅರ್ಪಿಸಲಾಯಿತು.
ಅತಿಯಾದ ಮಳೆಯಿಂದ, ಮಲೆನಾಡು ತತ್ತರವಾಗಿದ್ದು, ರೈತರ ವರ್ಷಾವಧಿ ಬೆಳೆ ನೆಲಕಚ್ಚುತ್ತಿದೆ.ಹಾಗು ಭೂ ಕುಸಿತ ಅತಿವೃಷ್ಟಿಯ ಬೀತಿಯಲ್ಲಿರುವ ಮಲೆನಾಡಿನಲ್ಲಿ ಮುಂದಿನ ದಿನಗಳಲ್ಲಾದರೂ ಮಳೆ ಹಿತಮಿತವಾಗಿ ಮಳೆ ಬಂದು ಕೃಷಿಕರು,ಸಾರ್ವಜನಿಕರು ಹಾಗು ಪ್ರಾಣಿ ಸಂಕುಲಕ್ಕೆ ಒಳಿತಾಗಲಿ, ಎಂದು ಪ್ರಾರ್ಥಿಸಿ ಕರ್ನಾಟಕ ಜಾನಪದ ಪರಿಷತ್ತಿನ ಹಾಗು ಕ,ಸಾ,ಪ ಮಹಿಳಾ ಘಟಕದವರು ಭಾಗಿನವನ್ನು ಭದ್ರೆಗೆ ಅರ್ಪಿಸಿದರು.
ಈ ಬಾರಿ ಸಮೃದ್ಧಿಯಾದ ಮಳೆಯಾಗಿದ್ದು,ಇದು ಅತಿವೃಷ್ಟಿ ಆಗದಿರಲಿ ಎಲ್ಲರಿಗೂ ಒಳಿತಾಗಲಿ ಎಂದು ತಾಯಿ ಭದ್ರೆಯು ಈ ಬಾಗಿನವನ್ನು ಅರ್ಪಿಸಿದ್ದೇವೆ ಎಂದು ಕ.ಸಾ.ಪದ ಮಹಿಳಾ ಘಟಕದ ಅಧ್ಯಕ್ಷರಾದ ಮಮ್ತಾಜ್ ಬೇಗಂ ಅಭಿಪ್ರಾಯಪಟ್ಟರು.
ಜಲ ಮೂಲಗಳು ಭರ್ತಿಯಾಗಿ, ರೈತರು
ಸಂತುಷ್ಟರಾಗುವಷ್ಟು, ಮಳೆಯಾದರೆ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಹಳ್ಳ, ತೊರೆಗಳಿಗೆ, ಬಾಗಿನ ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದ್ದು,
ಈ ಬಾರಿ ಭದ್ರೆಗೆ ಬಾಗಿನ ಅರ್ಪಿಸಿ ಕೃತಜ್ಞರಾಗಿದ್ದೇವೆ ಎಂದು ಕ.ಜಾ.ಪ.ದ ಅಧ್ಯಕ್ಷರಾದ ರಜಿತ್ ಕೆಳಗೂರ್ ಅಭಿಪ್ರಾಯ ಪಟ್ಟರು
ಈ ಕಾರ್ಯಕ್ರಮದಲ್ಲಿ ಡಾ.ಜಾನಕಿ ಸುಂದರೇಶ್.ವೀಣಾ ಮುರುಗೇಶ್,ಲೀಲಾ ಶ್ರೀಕಾಂತ್,ಗಾಯಿತ್ರಿ ಹೆಬ್ಬಾರ್ ಆಶಾ,ಪೂರ್ಣಿಮಾ,ನಿಕಿತಾ,
ಪ್ರಿಯಾ,ಗಣೇಶ್, ಶಮೀರ್ ಸುಚಿತಾ ಉದಯ್,ಹಾಗು ಮತ್ತಿತರ ಕಜಾಪ ಹಾಗು ಕಸಾಪ ಮಹಿಳಾ ಘಟಕದ ಸದಸ್ಯರು ಹಾಜರಿದ್ದರು.