ಕಳಸ ಲೈವ್ ವರದಿ
ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 2 ರಂದು ಪವಿತ್ರವಾದ “ಮುಕ್ಕೋಟಿ ದ್ವಾದಶಿ” ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಈ ವಿಶೇಷ ದಿನದಂದು ದೇವರಿಗೆ ವಿವಿಧ ಧಾರ್ಮಿಕ ಮತ್ತು ಪೌರಾಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರಾತಃಕಾಲ (ಬೆಳಿಗ್ಗೆ 6:00 ಗಂಟೆಗೆ): ಮುಕ್ಕೋಟಿ ದ್ವಾದಶಿ ಅಂಗವಾಗಿ ದೇವರು ರುದ್ರತೀರ್ಥಕ್ಕೆ ವಿಜಯಂಗೈಯಲಿದ್ದಾರೆ. ತದನಂತರ ದೇವರು ರುದ್ರತೀರ್ಥದಿಂದ ಹಿಂದಿರುಗಿದ ಬಳಿಕ ಕಟ್ಟೇಪೂಜೆ ನೆರವೇರಲಿದೆ. ಬಳಿಕ ಮಂಗಳಾರತಿ ಮತ್ತು ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ರಾತ್ರಿ 8 ಗಂಟೆಗೆ ಪೇಟೆ ಉತ್ಸವವು ವಿಜೃಂಭಣೆಯಿAದ ನಡೆಯಲಿದೆ. ತದನಂತರ ಪೇಟೆ ಉತ್ಸವದ ಬಳಿಕ ಅಷ್ಟಾವಾದನ ಸೇವೆಯೊಂದಿಗೆ ಭಗವಂತನಿಗೆ ಮಹಾಪೂಜೆ ನೆರವೇರಲಿದೆ.
ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳ ಸೇವಾಕಾರ್ಯವನ್ನು ಪಿ. ಪದ್ಮನಾಭ ಭಟ್ಟ ಮತ್ತು ಸಹೋದರರು ಸಮರ್ಪಿಸುತ್ತಿದ್ದಾರೆ.
ಆದ್ದರಿಂದ, ಎಲ್ಲಾ ಭಕ್ತಾದಿಗಳು ಈ ಪವಿತ್ರ ಮುಕ್ಕೋಟಿ ದ್ವಾದಶಿಯಂದು ನಡೆಯುವ ವಿಶೇಷ ಪೂಜೆ ಮತ್ತು ಉತ್ಸವಗಳಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಜಿ.ಎಸ್.ಬಿ ಸಮಾಜ ಕೇಳಿಕೊಂಡಿದೆ.



