

ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳಸ ರೋಟರಿ ಕ್ಲಬ್ ಆಶ್ರಯದಲ್ಲಿ ನೂತನ ರೋಟರಾಕ್ಟ್ ಕ್ಲಬ್ ಸ್ಥಾಪನೆಗೊಂಡಿತು. ರೋಟರಾಕ್ಟ್ ಕ್ಲಬ್ ಉದ್ಘಾಟನೆಯನ್ನು ಅನ್ನು ರೋಟರಿ ಜೋನ್ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ್ ಜೋಶಿ ರವರು ನೆರವೇರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಇಂಚರ ವಿ.ಎಂ. ಅವರನ್ನು ಅಧ್ಯಕ್ಷರಾಗಿ, ಆಕಾಶ್ ಶೆಟ್ಟಿ ಅವರನ್ನು ಕಾರ್ಯದರ್ಶಿಯಾಗಿ, ಶ್ರೇಯಸ್ ಕೆ.ಎ. ಅವರನ್ನು ಸೆಲೆಕ್ಟ್ ಪ್ರೆಸಿಡೆಂಟ್ ಆಗಿ ಮತ್ತು ಅನ್ವಿತಾ, ಸಂಜನಾ ಎನ್., ಸುಜಯ್ ವೈ.ಎಸ್., ಶಬರೀಶ್ ಹೆಚ್.ಎಸ್., ಕೃತಿಕ್ ಹೆಚ್.ಎಂ., ಎಲ್. ದೀಕ್ಷಿತಾ, ಟಿ. ಅಂಜಲಿ, ಎಸ್. ಸಾನ್ವಿ ಮತ್ತು ಆದರ್ಶ್ ಜೈನ್ ಅವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಕಾಲೇಜು ಸಿಡಿಸಿ ಕಾರ್ಯಧ್ಯಕ್ಷ ರಾಜೇಂದ್ರ ಹೆಬ್ಬಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ರೋಟರಾಕ್ಟ್ ಕ್ಲಬ್ ಒಂದು ಪರಿಣಾಮಕಾರಿ ವೇದಿಕೆಯಾಗಿ ಕೆಲಸ ಮಾಡಲಿದೆ ಎಂದುಹೇಳಿದರು.
ರೋಟರಾಕ್ಟ್ ಜೋನಲ್ ಕೋಆರ್ಡಿನೇಟರ್ ಎಂ.ಆರ್. ರವಿ ಮಾತನಾಡಿ ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪೊಲಿಯೋ ನಿರ್ಮೂಲನ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ವಿಶ್ವವನ್ನು ಪೊಲಿಯೋಮುಕ್ತಗೊಳಿಸುವ ದಿಸೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕಳಸ ರೋಟರಿ ಕ್ಲಬ್ ಅಧ್ಯಕ್ಷ ಮಹೇಂದ್ರ ಹೆಚ್.ಜಿ g ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ವಿಶಾಲ್, ಪ್ರಾಧ್ಯಾಪಕರಾದ ವಿಶುಕುಮಾರ್, ದಿನೇಶ್ ಟಿ.ಎಂ., ಹಾಗೂ ಉಪನ್ಯಾಸಕರಾದ ಕಾಂತಿ ಪೈ, ಸುನಿಲ್ ಉಪಸ್ಥಿತರಿದ್ದರು.


