ಕಳಸ ಲೈವ್ ವರದಿ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಡೆಯನ್ನು ಖಂಡಿಸಿ, ಕಳಸ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಇಂದು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಇಲಾಖೆಯನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುವುದರಿಂದ ನೌಕರರ ಭವಿಷ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕೆಲ ಕಾಲ ಕಚೇರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ನಿರತರಾದರು.
ಖಾಸಗೀಕರಣದ ನಿರ್ಧಾರವು ಕೇವಲ ಸಾರ್ವಜನಿಕರಿಗೆ ಮಾರಕವಲ್ಲ, ಬದಲಿಗೆ ದಶಕಗಳಿಂದ ಇಲಾಖೆಯನ್ನು ನಂಬಿಕೊAಡಿರುವ ನೌಕರರ ಬದುಕನ್ನು ಬೀದಿಗೆ ತಳ್ಳುತ್ತದೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಳಸ ಮೆಸ್ಕಾಂ ಎಇಇ ರಾಘವೇಂದ್ರ ಸೇರಿದಂತೆ ಅಧಿಕಾರಿಗಳಾದ ಕಾರ್ತಿಕ್, ಸತೀಶ್, ಮಲ್ಲಿಕಾರ್ಜುನ್ ಹಾಗೂ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
