ಕಳಸ ಲೈವ್ ವರದಿ
ಇಲ್ಲಿನ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ೨೦೨೬-೨೭ನೇ ಸಾಲಿನ ‘ಅಹಲ್ಯಾಬಾಯಿ ಮಾತೃಭಾರತಿ’ ಸಮಿತಿಯ ಉದ್ಘಾಟನಾ ಸಮಾರಂಭವು ನಡೆಯಿತು
ಕಾರ್ಯಕ್ರಮದಲ್ಲಿ ದೀಪ ಮಾತಾಜಿ ಅವರು ಮಾತನಾಡಿ, ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಮಾತೆಯರ ಸಹಕಾರ ಅತ್ಯಗತ್ಯ. ಪ್ರತಿಯೊಬ್ಬರೂ ಸ್ವಉದ್ಯೋಗ ಹಾಗೂ ಸ್ವಾವಲಂಬಿ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಆನಂದ್ ಗುರೂಜಿ ಅವರು ಮಾತನಾಡಿ, ಹೆಣ್ಣು ಸಬಲೆಯಾದಾಗ ಮಾತ್ರ ಮನೆ ಸುದೃಢವಾಗಿರಲು ಸಾಧ್ಯ. ನಾವೆಲ್ಲರೂ ಶ್ರೇಷ್ಠರ ಹಾದಿಯಲ್ಲಿ ಮುನ್ನಡೆಯಬೇಕು ಶಾಲೆಯಲ್ಲಿ ಮುಂದೆ ನಡೆಯುವ ರಕ್ಷಾ ಬಂಧನ, ಬಳೆ ಶಾಸ್ತ್ರ, ಮಾತೃ ಭೋಜನ, ಶೈಕ್ಷಣಿಕ ಪ್ರವಾಸ ಹಾಗೂ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀಣಾ ಮಾತಾಜಿ ಅವರು ಮಾತನಾಡಿ, ಅಹಲ್ಯಾಬಾಯಿ ಅವರ ಜೀವನ ಹಾಗೂ ಸಾಧನೆಗಳ ಬಗ್ಗೆ ಪರಿಚಯಾತ್ಮಕವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಅಹಲ್ಯಾಬಾಯಿ ಮಾತೃಭಾರತಿ ಸಮಿತಿಯ ನೂತನ ಅಧ್ಯಕ್ಷರಾಗಿ ಸುಜಾತ ಹಾಗೂ ಕಾರ್ಯದರ್ಶಿಯಾಗಿ ಸುಚಿತ ಉದಯ್ ಶೆಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಸಮಿತಿಯ ನೂತನ ಸದಸ್ಯರುಗಳಾಗಿ ರಶ್ಮಿ, ವಿನೋದ, ಆಶಾ ಸುದೀಶ್, ಸುಕನ್ಯ, ನವ್ಯ ನಾಗರಾಜ್, ಶ್ರೀಲತಾ, ಜ್ಯೋತಿ ಹಾಗೂ ಉಷಾ ಅವರು ಆಯ್ಕೆಯಾದರು.
ಕಾರ್ಯಕ್ರಮದ ಆರಂಭದಲ್ಲಿ ಸುಚಿತ ಉದಯ್ ಶೆಟ್ಟಿ ಪ್ರಾರ್ಥಿಸಿದರು. ಸುಜಾತ ಅವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹರ್ಷಿಣಿ ಮಾತಾಜಿ ನೆರವೇರಿಸಿದರೆ, ಶ್ರೀಮತಿ ಕನಕಲಕ್ಷ್ಮಿ ವಂದನಾರ್ಪಣೆ ಮಾಡಿದರು.
