ಕಳಸ ಲೈವ್ ವರದಿ
ಇಲ್ಲಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಆಗಸ್ಟ್ 21, 2026ರ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವ್ರತ, ಲಕ್ಷದೂರ್ವಾರ್ಚನೆ ಕೋಟಿ ಕುಂಕುಮಾರ್ಚನೆ ನಡೆಯಲಿದೆ.
ಬೆಳಿಗ್ಗೆ 09:00 ಗಂಟೆಗೆ ಸರಿಯಾಗಿ ದೇವಸ್ಥಾನದ ಆವರಣದಲ್ಲಿ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.
ಸಾAಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 04:00 ಗಂಟೆಯಿ0ದ ಕ್ಷೇತ್ರದ ‘ಶ್ರೀ ಲಲಿತಕಲಾ ಮಂಟಪ’ದಲ್ಲಿ ಪ್ರಸಿದ್ದ ಕಲಾವಿದರಿಂದ “ಭೀಷ್ಮಸೈನ್ಯಾಧಿಪತ್ಯ-ಕರ್ಮಬಂಧ” ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಸಕುಟುಂಬ ಸಮೇತರಾಗಿ, ಇಷ್ಟಮಿತ್ರರೊಂದಿಗೆ ಆಗಮಿಸಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಭಕ್ತಾದಿಗಳಿಗೆ ವಿನಂತಿಸಿಕೊ0ಡಿದ್ದಾರೆ.
