ಕಳಸ ಲೈವ್ ವರದಿ
ಕಳಸ ತಾಲೂಕಿನ ಸಂಸೆ ಗ್ರಾಮ ವ್ಯಾಪ್ತಿಯ ಕಳಸ–ಕುದುರೆಮುಖ ಮುಖ್ಯ ರಸ್ತೆಯ ಗಣಪತಿ ಕಟ್ಟೆ ಸಮೀಪ ಪ್ರವಾಸಿಗರ ಕಾರೊಂದು ಸೊಮಾವತಿ ನದಿಗೆ ಬಿದ್ದು, ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಕಳಸಕ್ಕೆ ಪ್ರವಾಸಕ್ಕೆ ಬಂದಿದ್ದ ದಂಪತಿಗಳು ಕಳಸ–ಕುದುರೆಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಗಣಪತಿ ಕಟ್ಟೆ ಸಮೀಪ ರಸ್ತೆಯ ಬದಿಯಲ್ಲಿರುವ ಟೀ ತೋಟವನ್ನು ವೀಕ್ಷಿಸಲು ಕಾರನ್ನು ನಿಲ್ಲಿಸಿದ್ದರು. ಈ ಸಂರ್ಭದಲ್ಲಿ ಪತ್ನಿ ಕಾರಿನಿಂದ ಕೆಳಗಿಳಿದಿದ್ದು, ಪತಿ ಕಾರನ್ನು ಹಿಂಬದಿಗೆ ತೆಗೆಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಏಕಾಏಕಿ ರಸ್ತೆಯ ಅಂಚಿನಿಂದ ಕೆಳಕ್ಕೆ ಉರುಳಿ ಸೊಮಾವತಿ ನದಿಗೆ ಬಿದ್ದಿದೆ.
ನದಿಯಲ್ಲಿದ್ದ ಬಂಡೆ ಕಲ್ಲುಗಳ ನಡುವೆ ಕಾರು ಸಿಲುಕಿಕೊಂಡಿದ್ದು, ಈ ವೇಳೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಕಾರು ನದಿಗೆ ಬೀಳುತ್ತಿದ್ದಂತೆ ಚಾಲಕ ತಕ್ಷಣ ಕಾರಿನಿಂದ ಹೊರಬಂದು ನದಿಯಿಂದ ಮೇಲಕ್ಕೆ ಬಂದಿದ್ದಾರೆ. ಪತ್ನಿಯೂ ಸುರಕ್ಷಿತವಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾರೊಂದು ಏಕಾಏಕಿ ನದಿಗೆ ಬಿದ್ದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಪ್ರವಾಸಿಗರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.
ಕಳಸ–ಕುದುರೆಮುಖ ರಸ್ತೆಯ ಈ ಭಾಗದಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಪ್ರವಾಸಿಗರು ಟೀ ತೋಟ ಹಾಗೂ ಪ್ರಕೃತಿ ಸೌಂರ್ಯ ವೀಕ್ಷಿಸುವುದು ಸಾಮಾನ್ಯವಾಗಿದ್ದು, ಅಪಾಯದಂಚಿನಲ್ಲಿರುವ ಈ ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
