ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕಳಸ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಇದರ ಸೇವಾದೀಕ್ಷಾ ಸಮಾರಂಭದ ಉದ್ಘಾಟನೆಯನ್ನು ಹೊರನಾಡು ದೇವಸ್ಥಾನದ ಶ್ರೀಮತಿ ರಾಜಲಕ್ಷ್ಮೀ ಬಿ ಜೋಷಿ ನೆರವೇರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಕಸಾಪ ಕಸಬಾ ಹೋಬಳಿಯ ನೂತನ ಅಧ್ಯಕ್ಷರಾದ ಶೇಖರ ಎಲ್ ಶೆಟ್ಟಿ,ಗೌರವ ಕಾರ್ಯದರ್ಶಿ ವೈ ಪ್ರೇಮ್ ಕುಮಾರ್,ಮಧುಸೂಧನ್,ಕೋಶಾಧ್ಯಕ್ಷ ಹೆಚ್.ಪಿ.ರಾಮಚಂದ್ರ ಹೆಬ್ಬಾರ್,ಅಜಿತ್ ಪ್ರಸಾದ್,ಶ್ರೀಮತಿ ಕಲ್ಪನಾ, ಗೀತಾ ಧರ್ಮವೀರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದಂತ ಕು| ಅಮುದ, ಕು| ವೈಸಿರಿ ಮತ್ತು ಶ್ರೀಮತಿ ರಶ್ಮೀ ಇವರನ್ನು ಗೌರವಿಸಲಾಯಿತು
ಕರ್ನಾಟಕ ಯುನೈಟೆಡ್ ವರ್ಕಿಂಗ್ ಜರ್ನಲಿಸ್ಟ್ ಅಸೋಷಿಯೇಷನ್ ಕಾರ್ಯದರ್ಶಿ ಜಯಕುಮಾರ್, ಕಳಸ ತಾಲ್ಲೂಕು ಕಸಾಪ ಅಧ್ಯಕ್ಷ ಅ.ರಾ.ಸತೀಶ್ಚಂದ್ರ,ಸಾಹಿತಿ ಅ.ರಾ.ರಾಧಕೃಷ್ಣ,ಪೂರ್ವಾಧ್ಯಕ್ಷ ನರೇಂದ್ರ ಕಲ್ಲಾನೆ,ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ,ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ,ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಇದ್ದರು.
