ತಾಲ್ಲೂಕಿನ ಹಿರೇಬೈಲ್ ಸಂತ ಜೋಸೆಫರ ಚರ್ಚಿನ ಧರ್ಮಗುರು ಜಾರ್ಜ್ ಅಂದ್ರಾದೆ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಭಾನುವಾರ ಮರಸಣಿಗೆ ಮತ್ತು ಇಡಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಗೌರವ ಸಮರ್ಪಣೆ ಸಲ್ಲಿಸಿದರು.

ಫಾದರ್ ಜಾರ್ಜ್ ಅಂದ್ರಾದೆ ಅವರು ಹಿರೇಬೈಲ್ ಸೇರಿ ಮೂಡಿಗೆರೆ,ಗೋಣಿಬೀಡು,ಮರಿಯಾನಗರ,ಹಾಸನ,ಸಾಗರ ಮತ್ತಿತರ ಧರ್ಮಕೇಂದ್ರಗಳಲ್ಲಿ ಒಟ್ಟು 46 ವರ್ಷಗಳ ಗುರು ಸೇವೆ ನೀಡಿದ್ದಾರೆ.ಹಿರೇಬೈಲಿನಲ್ಲಿ ಏಳು ವರ್ಷಗಳ ಸೇವೆ ನೀಡಿ ನಿವೃತ್ತರಾಗುತ್ತಿರುವ ಇವರಿಗೆ ಗೌರವ ಸಮರ್ಪಣೆ ಸಲ್ಲಿಸಿ, ಹಾಗೂ ಹೊಸ ಧರ್ಮ ಗುರು ಡೆವಿಡ್ ಪ್ರಕಾಶ್ ಅವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಮರಸಣಿಗೆ, ಇಡಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಭಂಡಾರಿ, ಉಪಾಧ್ಯಕ್ಷೆ ವಿಶಾಲಕ್ಷೀ ಸದಸ್ಯರಾದ ,ವಿನ್ಸೆಂಟ್ ಪುಟ್ತಾದೋ,ಮೋಹನ್,ಹೇಮಾವತಿ ಇದ್ದರು.

