ಕಳಸ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ನಾಗರಾಜ ಅವರನ್ನು ಅಮಾನತು ಮಾಡಲಾಗಿದೆ.


ಮರ ಕಡಿತಲೆ ಪ್ರಕರಣ, ಅರಣ್ಯ ಪ್ರದೇಶದಲ್ಲಿ ಮಣ್ಣು ಕಳ್ಳಸಾಗಾಣಿಕೆ ಹಾಗೂ ಅರಣ್ಯ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಅರಣ್ಯ ಇಲಾಖೆಯ ಗೋದಾಮಿನಿಂದ ಶ್ರೀಗಂಧ ಕಳ್ಳಸಾಗಾಣಿಕೆಗೆ ಅವಕಾಶ ನೀಡಿರುವುದು ಹಾಗೂ ಶ್ರೀಗಂಧ ಕಳ್ಳಸಾಗಾಣಿಕೆಯ ಅಪರಾಧಿಗೆ ಜಾಮೀನು ಸಿಗಲು ದಾಖಲೆಗಳನ್ನು ತಿದ್ದುಪಡಿ ಮಾಡಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಶಿಸ್ತು ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಇವರು ಆದೇಶಿಸಿದ್ದಾರೆ.

ಇದರೊಂದಿಗೆ ಕಳೆದ 10 ದಿನದ ಒಳಗಾಗಿ ಕಳಸ ಅರಣ್ಯ ಇಲಾಖೆಯಿಂದ ಇಬ್ಬರು ಅಮಾನತು ಆದಂತಾಗಿದೆ.


