ಕಳಸ ಲೈವ್ ವರದಿ
ಕಳಸ ದೇವಸ್ಥಾನದ ಆವರಣದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಎಂಬುವವರು ಮಂಗಳವಾರ ಸಂಜೆ ಪ್ರಬೋಧಿನಿ ಶಾಲೆಯಲ್ಲಿ ಕಲಿಯುತ್ತಿರುವ ತನ್ನ ಮಗನ ಕರೆದುಕೊಂಡು ಹೋಗಿ ಬರುವ ಸಂದರ್ಭದಲ್ಲಿ ಮೊಬೈಲ್ ನ್ನು ಕಳೆದು ಕೊಂಡಿದ್ದರು.

ಅದೇ ಸಮಯದಲ್ಲಿ ಕಳಸ ಕೆಇಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಭಂಡಾರಿಯವರು ತನ್ನ ಮಗಳನ್ನು ಮನೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ತನ್ನ ಮಗಳು ಧನ್ವಿ ಮೊಬೈಲ್ ಬಿದ್ದಿರುವುದನ್ನು ನೋಡಿ ತೆಗೆದುಕೊಂಡು ಹೋಗಿದ್ದರು.

ಇತ್ತ ಮೊಬೈಲ್ ಕಳೆದುಕೊಂಡಿದ್ದ ಕೃಷ್ಣ ವ್ಯಾಟ್ಸಾಪ್ ಗ್ರೂಪ್ ನಲ್ಲಿ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ತಿಳಿಸಿದಾಗ ಕೂಡಲೇ ಬಂದು ರಾಘವೇಂದ್ರರವರ ಮಗಳು ಧನ್ವಿ ಮೊಬೈಲ್ ನ್ನು ಕೃಷ್ಣ ಅವರ ಪತ್ನಿಗೆ ಮರಳಿ ನೀಡಿದ್ದಾರೆ.

ಮೊಬೈಲ್ ಮರಳಿ ಪಡೆದ ಕೃಷ್ಣ ಸಂತಸ ಪಟ್ಟರೆ, ಸಿಕ್ಕಿರುವ ಮೊಬೈಲ್ ನ್ನು ವಾಪಾಸು ಕೊಟ್ಟ ಸಂತೃಪ್ತಿ ರಾಘವೇಂದ್ರರವರಿಗೆ ಮತ್ತು ಅವರ ಮಗಳಿಗೆ.

