ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವರ ಮತ್ತು ಪರಿವಾರ ದೇವರುಗಳ ಕಾಣಿಕೆ ಹುಂಡಿಯ ಪರ್ಕಾವಣೆ ಗುರುವಾರ ನಡೆಯಿತು. ಈ ಹುಂಡಿಗಳಲ್ಲಿ 6 ತಿಂಗಳಲ್ಲಿ 18.39 ಲಕ್ಷ ರೂ ಸಂಗ್ರಹ ಆಗಿದೆ.

ಹುಂಡಿಯಲ್ಲಿ ಭಕ್ತರು ತಮ್ಮ ಭಕ್ತಿಗನುಸಾರವಾಗಿ ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕುತ್ತಾರೆ. ಭಕ್ತ ತನ್ನ ಬೇಡಿಕೆಯನ್ನು ಈಡೇರಿಸುವಂತೆ ನಾನಾ ರೂಪದಲ್ಲಿ ಹರಕೆಯನ್ನು, ಪ್ರಾರ್ಥನೆಯನ್ನು ಮಾಡುತ್ತಾನೆ.
ಇಲ್ಲೊಬ್ಬ ಭಕ್ತ ತನ್ನ ಬೇಡಿಕೆಯನ್ನು ಪತ್ರದ ಮುಖಾಂತರ ತಿಳಿಸಿದ್ದಾರೆ.

ಉಕ್ಕಡದ ಮಾರಮ್ಮ ಬಳಿ ತನ್ನ ಬೇಡಿಕೆಯನ್ನು ಪತ್ರದ ಮುಖಾಂತರ ತಿಳಿಸಿ ಕಲಶೇಶ್ವರ ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾರೆ. ನನ್ನ ಮಗ ಮತ್ತು ಸೊಸೆ ಅತ್ತೆ ಮಾವ, ತಂದೆ ತಾಯಿ ಮನೆ ಮಠ ಅಂತ ಪ್ರೀತಿಯಿಂದ ಮಾತನಾಡಿಸಬೇಕು. ಪ್ರೀತಿಯಿಂದ ಪೋನ್ ಮಾಡಬೇಕು. ಸೊಸೆಯÀ ಮನಸ್ಸಲ್ಲಿ ನಾವುಗಳು ಒಳ್ಳೆಯವರಂತೆ ಕಾಣಬೇಕು. ಮಗ ಮತ್ತು ಸೊಸೆ ಇವರಿಬ್ಬರ ತಿಂಗಳ ತಿಂಗಳ ಸಂಬಳವನ್ನು ನಮ್ಮ ಕೈಗೆ ಕೊಡಬೇಕು. ನಮ್ಮ ಋಣದ ಬಾದೆಯನ್ನು ಸಾಲದ ಬಾಧೆಯನ್ನು ಬೇಗ ತೀರಿಸುವ ಹಾಗೆ ಮಗ ಸೊಸೆಗೆ ಬುದ್ದಿಕೊಡು. ಅವನು ಒಪ್ಪಿಕೊಂಡಿರುವ 1 ಲಕ್ಷದ 7 ಸಾವಿರ ರೂ ಆದಷ್ಟು ಬೇಗ ಕೊಡುವ ಹಾಗೆ ಮಾಡು. ಒಳ್ಳೆ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು.ನಮಗೆ ಕೊಡಬೇಕಾಗಿರುವ ಹಣವನ್ನು ಕೊಡುವ ಹಾಗೆ ಬುದ್ದಿಕೊಡು. ನನ್ನ ಈ ಎಲ್ಲಾ ಹರಕೆ ಕೋರಿಕೆಯನ್ನು ನೆರವೇರಿಸಿಕೊಡು ಎಂದು ಪತ್ರದ ಮುಖಾಂತರ ತಿಳಿಸಿದ್ದಾರೆ.


