ಕಳಸ ಲೈವ್ ವರದಿ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕುದುರೆಮುಖ ಘಟಕದಿಂದ ಗಾಂಧಿ ಜಯಂತಿ ಪ್ರಯುಕ್ತ ಕೆಂಗನಕೊಂಡದಿಂದ ನೆಲ್ಲಿಬೀಡಿನವರೆಗೆ ರಸ್ತೆ ಬದಿ ಶ್ರಮದಾನ ಮಾಡಿದರು.

ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.ಅರಣ್ಯ ಮತ್ತು ಮೆಸ್ಕಾಂ ಇಲಾಖೆ ಸಿಬ್ಬಂದಿಗಳ ಜೊತೆ ರಸ್ತೆಗೆ ಚಾಚಿಕೊಂಡಿದ್ದ ಮರದ ರೆಂಬೆ ಕೊಂಬೆಗಳನ್ನು ತೆರವು ಮಾಡಲಾಯಿತು.ರಸ್ತೆ ಬದಿಯಲ್ಲಿ ಬೆಳೆದಿದ್ದ ಕಾಡು ಸವರಿ ಸ್ವಚ್ಚ ಮಾಡಲಾಯಿತು. ವಿದ್ಯುತ್ ಮಾರ್ಗಕ್ಕೆ ತಡೆಯೊಡ್ಡುತ್ತಿದ್ದ ಮರದ ರೆಂಬೆಗಳನ್ನು ತೆರವು ಮಾಡಿದರು.

ಈ ಕಾರ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕುದುರೆಮುಖ ಘಟಕದ ಸದಸ್ಯರು ಭಾಗವಹಿಸಿದ್ದರು.


