ಕಳಸ ಲೈವ್ ವರದಿ
ಹದೆಗೆಟ್ಟ ರಸ್ತೆಯ ದುರಸ್ಥಿಗಾಗಿ ಒತ್ತಾಯಿಸಿ ಲೋಕೋಪಯೋಗಿ ಇಲಾಖೆ ವಿರುದ್ದ ಅಕ್ಕೋಬರ್ 7 ರಂದು ಕಳಸ ಪಟ್ಟಣದಲ್ಲಿ ರಸ್ತೆ ತಡೆ ನಡೆಸಲಾಗುತ್ತದೆ ಎಂದು ಮುಖಂಡ ಬಿ.ವಿ.ರವಿ ರೈ ತಿಳಿಸಿದ್ದಾರೆ.

ಕಳಸ ತಾಲ್ಲೂಕಿನ ಯಾವುದೇ ಮುಖ್ಯ ರಸ್ತೆಗಳು ಮತ್ತು ಗ್ರಾಮಾಂತರ ರಸ್ತೆಗಳಲ್ಲಿ ಓಡಾಡುವ ಸ್ಥಿತಿಯಲ್ಲಿ ಇಲ್ಲ. ಯಾವುದೇ ರಸ್ತೆಯ ನಿರ್ವಹಣೆಯನ್ನು ಮಾಡದೆ ಇರುವುದರಿಂದ ಮುಖ್ಯ ರಸ್ತೆಗಳ ಪರಿಸ್ಥಿತಿಯೇ ಚಿಂತಾಜನಕವಾಗಿದೆ. ಈ ಬಗ್ಗೆ ಹಲವಾರು ಬಾರಿ ಇಲಾಖೆಯ ಗಮನ ಸೆಳೆದರೂ ಕೂಡ ಇಲಾಖೆ ಸೂಕ್ತ ಸ್ಪಂದನೆ ನೀಡಿಲ್ಲ.ಇದನ್ನು ಖಂಡಿಸಿ ಇದೇ 7 ರಂದು ಪಟ್ಟಣದ ಕೈಮರ ಮತ್ತು ಕೆ.ಎಂ ರಸ್ತೆಯಲ್ಲಿ ಏಕ ಕಾಲಕ್ಕೆ ರಸ್ತೆ ತಡೆ ನಡೆಸಲಾಗುತ್ತದೆ. ಸ್ಥಳಕ್ಕೆ ಖುದ್ದಾಗಿ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ಗಳು ಸ್ಥಳಕ್ಕೆ ಬಂದು ಸೂಕ್ತವಾದ ಉತ್ತರ ನೀಡಬೇಕು.ಅಲ್ಲಿ ವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ.

ನಮ್ಮ ಹೋರಾಟಕ್ಕೆ ಈಗಾಗಲೇ ಕಳಸ ಆಟೋ ಮಾಲಕರ ಮತ್ತು ಚಾಲಕರ ಸಂಘ ಬೆಂಬಲ ನೀಡಿದೆ ಎಂದು ರವಿ ರೈ ತಿಳಿಸಿದ್ದಾರೆ.

