ಕಳಸ ಲೈವ್ ವರದಿ
ಬಾಳೆಹೊನ್ನೂರಿನಲ್ಲಿ ಸೋಮವಾರ ನಡೆದ 17 ವರ್ಷದ ಒಳಗಿನವರ ಕ್ರೀಡಾಕೂಟದಲ್ಲಿ ಕಳಸದ ಜೆಇಎಂ ಶಾಲೆಯ ಮಹಿತ್ ಹೆಬ್ಬಾರ್ 100 ಮೀಟರ್, 200 ಮೀಟರ್ ಮತ್ತು ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಅಗ್ರಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನ್ಶಿಪ್ ಗಳಿಸಿ ಇದರೊಂದಿಗೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಭಾಗವಹಿಸುವ ಅರ್ಹತೆ ಪಡೆದಿದ್ದಾನೆ.

ಅಲ್ಲದೆ ಇದೇ ಶಾಲೆಯ ವಿದ್ಯಾರ್ಥಿಗಳಾದ ಆಕಾಶ್ ಮತ್ತು ಸಮೃದ್ಧ್ 500 ಮೀಟರ್ ನಡಿಗೆಯಲ್ಲಿ ಮೊದಲ ಎರಡು ಸ್ಥಾನ ಗಳಿಸಿ ಇಬ್ಬರೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂದು ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ತಿಳಿಸಿದ್ದಾರೆ.

ಅಲ್ಲದೆ ಬಾಳೆಹೊಳೆ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿ ಸುದರ್ಶನ್ ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ, ಹಿರೇಬೈಲು ಸೇಕ್ರೆಡ್ ಹಾರ್ಟ್ ಶಾಲೆಯ ಮಹಮ್ಮದ್ ಶಾಜ್ ವಿದ್ಯಾರ್ಥಿ ಗುಂಡು ಎಸೆತದಲ್ಲಿ ಪ್ರಥಮ ಸ್ತಾನ ಪಡೆದು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

