ಕಳಸ ಲೈವ್ ವರದಿ
ಅವಿನ್ ಸ್ವರ ಸಂಗಮದ ದ್ವಿಶತಕ ಸಂಚಿಕೆಯ ಸಂಭ್ರಮದ ಪ್ರಯುಕ್ತ ಕಳಸದ ದುರ್ಗಾ ಮಂಟಪದಲ್ಲಿ ನ 24ರಿಂದ ನ 27ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ನ 24ರಂದು ಡಾ.ಪುನಿತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ, ನ 25 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ನ 26 ಮತ್ತು 27 ರಂದು ಸುಮಾರು 150 ಕ್ಕೂ ಹೆಚ್ಚೂ ಗ್ರಾಮೀಣ ಹಾಡುಗಾರರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವಿನ್ ಸ್ವರ ಸಂಗಮದ ಮುಖ್ಯಸ್ಥ ಮಗ್ಗಲಮಕ್ಕಿ ಗಣೇಶ್ ತಿಳಿಸಿದ್ದಾರೆ.


