ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ 26ರಂದು ತೇಜಸ್ವಿ ಸಾಹಿತ್ಯ ಯಾನ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಬೆಳಿಗ್ಗೆ 11 ರಿಂದ ಕಾರ್ಯಕ್ರಮ ನಡೆಯಲಿದೆ.
ಪತ್ರಕರ್ತ ಮತ್ತು ಲೇಖಕ ಸ.ಗಿರಿಜಾಶಂಕರ್ ಚಿದಂಬರ ರಹಸ್ಯ ಕೃತಿಯ ಉಪನ್ಯಾಸ ನೀಡಲಿದ್ದಾರೆ.ಅನಂತರ ಸಂವಾದ ಕೂಡ ಇರಲಿದೆ.
ತೇಜಸ್ವಿ ಬದುಕು, ಕೃತಿಗಳ ಬಗ್ಗೆ ಸಾಕ್ಷ್ಯ ಚಿತ್ರದ ಪ್ರದರ್ಶನ ಆಯೋಜಿಸಲಾಗಿದೆ.
ಸಾಹಿತ್ಯಾಸಕ್ತರು ಭಾಗವಹಿಸುವಂತೆ ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.




