ಕಳಸ ಲೈವ್ ವರದಿ
ಮರಸಣಿಗೆಯ ಗಾಂಧಿ ನಗರದ ಮನೆಯೊಂದರ ಸಮೀಪ ಕಳೆದ ಹತ್ತು ದಿನಗಳಿಂದ ಬೀಡು ಬಿಟ್ಟಿದ್ದ ನಾಗರ ಹಾವನ್ನು ಬಣಕಲ್ ಆರೀಫ್ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಮರಸಣಿಗೆಯ ಗಾಂಧಿ ನಗರದ ಜಾನಕಿ ಎಂಬುವವರ ಮನೆಯ ಹತ್ತಿರ ಕಳೆದ ಹತ್ತು ದಿನಗಳಿಂದ ನಾಗರ ಹಾವೊಂದು ಬೀಡು ಬಿಟ್ಟಿತ್ತು. ಇದರಿಂದ ಮನೆಯವರಿಗೆ ಆತಂಕ ಎದುರಾಗಿತ್ತು. ಏನೇ ಮಾಡಿದರು ಕದಲದೆ ಇದ್ದ ನಂತರ ಬಣಕಲ್ ಆರೀಫ್ ಅವರನ್ನು ಕರೆಸಲಾಯಿತು.
ಶನಿವಾರ ಸ್ಥಳಕ್ಕೆ ಬಂದ ಆರೀಫ್ ಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟರು.




