ಕಳಸ ಲೈವ್ ವರದಿ
ಜೆಸಿಐ ಕಳಸ ಇದರ ದಶಮನೋತ್ಸವ ಸಮಾರಂಭದ ಅಂಗವಾಗಿ ಡಿಸೆಂಬರ್ 22ಕ್ಕೆ ಕಳಸದ ದುರ್ಗಾ ಮಂಟಪದಲ್ಲಿ ಶಾಂಭವಿ ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಲಿದೆ.
ಕಾರ್ಯಕ್ರಮ ಸಂಜೆ 6.30ಗೆ ನಡೆಯಲಿದ್ದು. ಅಭಿನಯ ಕಲಾವಿದರು ಉಡುಪಿ ಇವರು ನಡೆಸಿಕೊಡಲಿರುವ ಈ ನಾಟಕ, ಸಾಮಾಜಿಕ ನಾಟಕದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅದ್ದೂರಿ ವಿನ್ಯಾಸವನ್ನು ಹೊಂದಿದ ನಾಟಕ ಇದಾಗಿದೆ.
ಕಾಂತಾರ ನೋಡಿ ಮೈ ಜುಂ ಎಂದಿತ್ತಾ? ಹಾಗಾದರೆ ಅಭಿನಯ ಕಲಾವಿದರ ಈ ವರ್ಷದ “ಶಾಂಭವಿ” ನಾಟಕ ನೋಡಿ..ಕಾಂತಾರಕ್ಕೆ ಟಕ್ಕರ್ ನೀಡುವಂತಹ ಅಭಿನಯ ಯಪ್ಪಾ..ನಾಟಕದಲ್ಲಿ ಹೀಗೂ ಮಾಡಬಹುದಾ ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ.
ತುಳು ರಂಗಭೂಮಿಯಲ್ಲಿ ಸದಾ ಹೊಸತನ ತರುತ್ತಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಶಿವದೂತೆ ಗುಳಿಗೆ ನಾಟಕ ನೋಡಿ ರೋಮಾಂಚನಗೊಂಡವರಿಗೆ “ಶಾಂಭವಿ” ಒಗ್ಗರಣೆ ಅನ್ನಬಹುದು. ಅದೇ ಹಳೇ ಮೂರು ಮನೆ ಸೆಟ್…ಆ ಕಡೆಯಿಂದ ಬಂದು ಈ ಕಡೆ ಹೋಗೋ ನಾಟಕಗಳಿಂದ ಏಕತಾನತೆ ಮೂಡಿದ್ದ ರಂಗಭೂಮಿಗೆ ಹೀಗೂ ಮಾಡಬಹುದು ಎಂಬುದನ್ನು ಅಭಿನಯ ಕಲಾವಿದರು ತೋರಿಸಿಕೊಟ್ಟಿದ್ದಾರೆ!! ಒಂದು ಸೀನ್ ಆಗಿ ಲೈಟ್ ಆಫ್ ಆಗಿ ಇನ್ನೊಂದು ಸೀನ್ ಬಂದಾಗ ಸೆಟ್ ಸಂಪೂರ್ಣ ಚೇಂಜ್!
ತೌಳವ ಗುತ್ತಿನ ಮನೆಯಲ್ಲಿ ಆಗೋ ಆವಾಂತರಗಳು..ಪ್ರಜ್ಞಾಳ ಅಭಿನಯ ಅತ್ಯದ್ಬುತ!!! ಅವಳ ನಟನೆಗೆ ನೋಡುಗರ ಮೈರೋಮಾಂಚನ!! ಕಣ್ಣಿನ ರೆಪ್ಪೆ ಮಿಟುಕಿಸಿದರೆ ಆ ನಟನಾ ವೈಭವ ಮಿಸ್ ಮಾಡ್ಕೋಳ್ತೀವೋ ಎಂಬಂತ ನಟ ರಾಕ್ಷಸಿ! ಇನ್ನೇನು ನಮ್ಮೊಳಗೆ ಅವಳು ಇಳಿಯುತ್ತಾಳೆ ಅನ್ನೋವಷ್ಟರಲ್ಲಿ ಲೈಟ್ ಆಫ್..ಮತ್ತೆ ನಿಮ್ಮ ಹೊಟ್ಟೆ ಹುಣ್ಣಾಗಿಸಲು ನಗುವಿನೋಕುಳಿ!! ಬಿದ್ದು ಬಿದ್ದು ನಗುವಷ್ಟು ಹಾಸ್ಯದ ಮೃμÁ್ಟನ್ನ!! ಎಲ್ಲೂ ಅತಿರೇಕವಿಲ್ಲ! ಇವೆಲ್ಲದಕ್ಕೂ ಮೇಳೈಸುವ ಬೆಳಕಿನ ಸಂಯೋಜನೆ ಮತ್ತು ಎದೆ ಝಲ್ಲೆನಿಸುವ ಹಿನ್ನಲೆ ಸಂಗೀತ!! ಅರೆಕ್ಷಣಕ್ಕೆ ಇದು ಮೂವಿನೋ ಅಥವಾ ನಾಟಕನೋ ಎಂಬ ಭಾವ!
ಆ ತೌಳವ ಗುತ್ತಿನ ಮನೆ, ದೇವಿ, ಜಲಪಾತ, ಬಾನಿನಲ್ಲಿ ಚಂದಿರ, ಕಪಾಟು, ತೊಟ್ಟಿಲು…ಎಲ್ಲಕ್ಕಿಂತ ಮಿಗಿಲಾಗಿ ಆ ಪುಟ್ಟ ಮಗುವಿನ ಮುಗ್ಧ ನಟನೆ!! ಕರುಳು ಹಿಂಡುವ ದೃಶ್ಯ..ಅಯ್ಯೋ..ಛೇ..ಅನ್ನೋ ಸಂಕಟ ವೀಕ್ಷಕರೊಳಗೆ..
ಕಾಂತಾರ ನೋಡಿ ಖುಷಿಯಾಗಿತ್ತಾ? ಹಾಗಾದರೆ ನಮ್ಮೂರಿಗೆ ಬರುವ ಶಾಂಭವಿ ನಾಟಕ ನೋಡಿ..





