ಕಳಸ ಲೈವ್ ವರದಿ
ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿ ಇರುವ ಪುನರ್ವಸು ಆಯುರ್ವೇದ ಚಿಕಿತ್ಸಾಲಯವು ಆರಂಭವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವೈದ್ಯರಾದ ಡಾ ಮಂಜುನಾಥ ಪ್ರಭು ಊರಿನಲ್ಲಿರುವ ಪ್ರಬೋಧಿನಿ ವಿದ್ಯಾಕೇಂದ್ರ, ಜೆಇಎಂ ಆಂಗ್ಲ ಮಾಧ್ಯಮ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಸರ್ಕಾರಿ ಪದವಿ ಕಾಲೇಜಿಗೆ ಆಯುರ್ವೇದದಲ್ಲಿ ಉಲ್ಲೇಖವಿರುವ ಆರೋಗ್ಯ ಹಾಗೂ ಜೀವನಶೈಲಿ ಮಾಹಿತಿಗಳನ್ನೊಳಗೊಂಡ ಬಿತ್ತಿ ಪತ್ರಗಳನ್ನು ವಿತರಿಸಿದರು.

ಇಂದಿನ ಕಾಲದಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಾಂಕ್ರಾಮಿಕ ಕಾಯಿಲೆಗಳು, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಜನರು ಆಯುರ್ವೇದದೆಡೆ ಹೆಚ್ಚಿನ ಒಲವು ತೋರುತ್ತಿದ್ದು ಜನರಲ್ಲಿ ಇನ್ನಷ್ಟು ಮಾಹಿತಿ ಹಾಗೂ ಆರೋಗ್ಯದ ಕಾಳಜಿಯ ಮಾಹಿತಿ ನೀಡುವ ಸಲುವಾಗಿ ಈ ಬಿತ್ತಿ ಪತ್ರವನ್ನು ನೀಡಿರುವುದಾಗಿ ಹೇಳಿದರು.

ಈ ಬಿತ್ತಿ ಪತ್ರವನ್ನು AAPTHAS ಎನ್ನುವ ಆಯುರ್ವೇದ ವೈದ್ಯರ ತಂಡ ರಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಗ್ಯ ಉಪನ್ಯಾಸ ಔಷಧಿ ಸಸ್ಯಗಳ ಕುರಿತು ಮಾಹಿತಿ ನೀಡುವ ಯೋಜನೆ ಇದೆ ಎಂದು ತಿಳಿಸಿದರು.

ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಸ್ವರ್ಣ ಪ್ರಾಶನ ವನ್ನು ಹಾಕಲಾಗುತ್ತಿದ್ದು ಇದನ್ನು 1 ತಿಂಗಳ ಮಗುವಿನಿಂದ 16 ವರ್ಷದವರೆಗೆ ನೀಡಬಹುದಾಗಿದೆ, ಇದು ಮಕ್ಕಳ ಉತ್ತಮ ಬೆಳವಣಿಗೆ ರೋಗನಿರೋಧಕ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ ಎಂದು ಇತ್ತೀಚಿನ ಸಂಶೋದನೆಯಲ್ಲು ದೃಢಪಟ್ಟಿದೆ ಎಂದು ಹೇಳಿದರು .

ಮುಂದಿನ ದಿನದಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು ಹೆಚ್ಚಿನ ಮಾಹಿತಿಗೆ ವೈದ್ಯರನ್ನು ಸಂಪರ್ಕಿಸಬಹುದಾಗಿದೆ 9483983327




