ಕಳಸ ಲೈವ್ ವರದಿ
ಮೂಡಿಗೆರೆ ವಿಧಾನಸಭೆ ಕ್ಷೇತ್ರ ಚುನಾವಣೆ ಸ್ಪರ್ಧಿಸಲು 12 ಮಂದಿಯಿಂದ ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ನಾಮಪತ್ರ ಪರಿಶೀಲನೆಯಲ್ಲಿ ಎಚ್.ಎಸ್.ಕುಮಾರಸ್ವಾಮಿ ಎಂಬುವರ ನಾಮಪತ್ರ ತಿರಸ್ಕೃತಗೊಂಡಿತು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರು ಸೋಮವಾರ ನಾಮಪತ್ರ ಹಿಂಪಡೆಯುವ ಕೊನೆಯ ದಿನ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ಇದೀಗ ಕಣದಲ್ಲಿ ಕಾಂಗ್ರಸ್ ಪಕ್ಷದಿಂದ ನಯನಾ ಮೋಟಮ್ಮ, ಜೆಡಿಎಸ್ನಿಂದ ಎಂ.ಪಿ.ಕುಮಾರಸ್ವಾಮಿ, ಬಿಜೆಪಿಯಿಂದ ದೀಪಕ್ ದೊಡ್ಡಯ್ಯ, ಬಿಎಸ್ಪಿಯಿಂದ ರಮೇಶ್ ಲೋಕವಳ್ಳಿ, ಸಿಪಿಐನಿಂದ ಕೆಳಗೂರು ರಮೇಶ್, ಎಸ್ಡಿಪಿಐನಿಂದ ಅಂಗಡಿ ಚಂದ್ರು, ಆಮ್ ಆದ್ಮಿ ಪಾರ್ಟಿಯಿಂದ ಸಿ.ಪ್ರಭು, ಪಕ್ಷೇತರರಾಗಿ ರುದ್ರೇಶ್ ಕಹಳೆ, ಎಲ್.ಚೇತನ್ ಪ್ರಸಾಧ್ ಸೇರಿದಂತೆ ಒಟ್ಟು 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.









