ಕಳಸ ಲೈವ್ ವರದಿ
ಕಳಸ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಸೋಮವಾರ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆಯಲ್ಲಿ ವೃದ್ಧ ಮಹಿಳೆಯರಿಗೆ ವಸ್ತ್ರದಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಯ ಸದಾನಂದ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್, ಕಾಫಿ ಬೆಳೆಗಾರ ಸಂದೀಪ್ ಗೌಡ, ಮಂಡಳಿಯ ಗೌರವಾಧ್ಯಕ್ಷೆ ಚಂಪಾ ಎಂ ರಾವ್ ನಿರ್ದೇಶಕರಾದ ಉಷಾ ಕುಮಾರ್, ಫಾತೀಮ ರೆಹಮಾನ್, ರಶ್ಮಿ ಹರ್ಷ, ಶೋಭ ದೇಸಾಯಿ, ಅಮಿತ ವಿನಾಯಕ, ಕಲ್ಪನ ಅಜಿತ್, ಆಶಾ ಗುರು ಶೇಟ್, ಸುಶೀಲ ಶೇಟ್, ಮೇನಕ ಪ್ರಸನ್ನ ಇದ್ದರು.

ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯರಿಗೆ ಹಲವು ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.ನೂರಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆಯನ್ನು ವಿತರಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಇನ್ಸ್ಪೈರ್ ಅವಾರ್ಡ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಂದಾರ ಎಸ್ ಭಟ್ ಅವರನ್ನು ಗೌರವಿಸಲಾಯಿತು.



