ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ವಿವಿದೆಡೆ ವಿವಿಧ ಕಾಮಗಾರಿಗಳಿಗೆ ಶಾಸಕಿ ನಯನ ಮೋಟಮ್ಮ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
20ಲಕ್ಷ ವೆಚ್ಚದ ಎಡದಾಳು ರಸ್ತೆ ಕಾಂಕ್ರೀಟಿಕರಣ, 20ಲಕ್ಷ ವೆಚ್ಚದ ಮಹಾವೀರ ರಸ್ತೆ ಕಾಮಗಾರಿ, 10 ಲಕ್ಷ ವೆಚ್ಚದ ಕಂಚಿನಕೆರೆ ರಸ್ತೆ ಕಾಮಗಾರಿ ಹಾಗೂ 50 ಲಕ್ಷ ವೆಚ್ಚದ ಮರಸಣಿಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದ್ದು, ಹಂತ ಹಂತವಾಗಿ ರಸ್ತೆ ಅಭಿವೃದ್ಧಿಯನ್ನು ಮಾಡಲಾಗುತ್ತದೆ.ಈಗಾಗಲೇ ತಾಲ್ಲೂಕಿನ ಎಡದಾಳು, ಕಂಚಿನಕೆರೆ, ಮರಸಣಿಗೆ, ಮಹಾವೀರ ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ. ಉತ್ತಮ ಗುಣಮಟ್ಟದೊಂದಿಗೆ ಕೂಡಲೇ ಕಾಮಗಾರಿ ನಡೆಸಲು ಗುತ್ತಿಗೆ ದಾರರಿಗೆ ತಿಳಿಸಲಾಗಿದೆ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.
ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ಕೆಪಿಸಿಸಿ ಸದಸ್ಯ ಪ್ರಭಾಕರ ಗೌಡ, ಕಾಂಗ್ರೆಸ್ ಮುಖಂಡರಾದ ವಿಶ್ವನಾಥ, ರಾಜೇಂದ್ರ ಪ್ರಸಾದ್, ಮಹಮ್ಮದ್ ರಫೀಕ್, ಕೆ.ಸಿ. ಮಹೇಶ್, ಅಬ್ದುಲ್ ಶುಕುರು, ವೀರೇಂದ್ರ ಜ್ರೈನ್, ಸುಜಿತ್ ಜೈನ್,ಜಗದೀಶ್ ಭಂಡಾರಿ, ಗಣೇಶ್ ಭಟ್ ಇತರರು ಇದ್ದರು.


