
ಕಳಸ ಲೈವ್ ವರದಿ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಶನಿವಾರ ಕಳಸ ಕಲಶೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ಚಿತ್ರ ನಿರ್ಮಾಪಕ ರವಿ ರೈ ಹಾಗೂ ತನ್ನ ತಂಡದವರೊಂದಿಗೆ ಕಲಶೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.ಸಾಮಾನ್ಯರಲ್ಲಿ ಅತಿ ಸಾಮಾನ್ಯರಂತೆ ಕಾಣಿಸಿಕೊಂಡ ಅವರು ದೇವಸ್ಥಾನದ ಅನ್ನ ಪ್ರಸಾದವನ್ನು ಸ್ವೀಕರಿಸಿ ಅಲ್ಲಿಯ ನೌಕರರು, ಭಕ್ತಾಧಿಗಳು ಹಾಗೂ ಶಾಲಾ ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಕಳೆದರು.
ನಾನು ಅತ್ಯಂತ ಇಷ್ಟ ಪಡುವ ಮತ್ತು ಪ್ರೀತಿಸುವ ಊರು ಕಳಸ. ಇಲ್ಲಿಯ ಜನ, ಪರಿಸರ ಎಲ್ಲವೂ ನನಗಿಷ್ಟ. ಇಲ್ಲಿಯ ಕಲಶೇಶ್ವರ ದೇವರನ್ನು ನಾನು ಅತಿಯಾಗಿ ನಂಬುತ್ತೇನೆ. ಇಲ್ಲಿಗೆ ಬಂದು ಕಲಶೇಶ್ವರನಿಗೆ ಭಕ್ತಿಯಿಂದ ಪ್ರಾರ್ಥನೆ ಮಾಡಿ ಬೇಡಿಕೊಂಡಾಗ ನನ್ನ ಮನಸ್ಸಿಗೆ ನೆಮ್ಮದಿ ಆಗುತ್ತದೆ. ಹಾಗಾಗಿ ನಾನು ಇಲ್ಲಿಗೆ ಆಗಾಗ ಬೇಟಿ ಕೊಡುತ್ತಿರುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
