ಕಳಸ ಲೈವ್ ವರದಿ
ಕಳೆದ ಎರಡು ದಿನಗಳಿಂದ ಕಳಸ ತಾಲ್ಲೂಕಿನಾಧ್ಯಂತ ಬೇಕಾ ಬಿಟ್ಟಿ ವಿದ್ಯುತ್ ನಿಲುಗಡೆ ಮಾಡುತ್ತಿರುವ ಪರಿಣಾಮ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗಲಿಡೀ ವಿದ್ಯುತ್ ಕಡಿತ ಮಾಡಿದ ಮೆಸ್ಕಾಂ ರಾತ್ರಿಯೂ ತನ್ನ ಚಾಲಿ ಮುಂದು ವರೆಸಿದೆ.ಶಾಲಾ ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದು ವಿದ್ಯುತ್ ನಿಲುಗಡೆಯಿಂದ ವಿದ್ಯಾರ್ಥಿಗಳ ಓದಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ವಿದ್ಯುತ್ ನಿಲುಗಡೆಯಿಂದ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.ವಿದ್ಯುತ್ತನ್ನೇ ನಂಬಿಕೊಂಡು ವಿವಿಧ ಕೆಲಸ ಕಾರ್ಯ ಮಾಡುತ್ತಿರುವವರು ಎರಡು ದಿನಗಳಿಂದ ಕೆಲಸ ಮಾಡಲು ಸಾಧ್ಯವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.
ಹಗಲಿಡೀ ವಿದ್ಯುತ್ ನಿಲುಗಡೆ ಮಾಡುವ ಮೆಸ್ಕಾಂ ರಾತ್ರಿಯೂ ವಿದ್ಯುತ್ ನಿಲುಗಡೆ ಮಾಡುವ ಅವಶ್ಯಕತೆ ಏನಿದೆ. ಸೋಮವಾರ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
