ಕಳಸ ಲೈವ್ ವರದಿ
ತಾಲ್ಲೂಕಿನ ಸಂಸೆಯ ರಕ್ಷಣ್ ಆರ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 592 ಅಂಕದೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ರಕ್ಷಣ್ ಆರ್ ಕಾರ್ಕಳ ಜ್ಞಾನ ಸುಧಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಂಪ್ಯೂಟರ್ ಸೈನ್ಸ್ ಹಾಗೂ ಗಣೀತದಲ್ಲಿ 100 ಅಂಕ, ಭೌತಶಾಸ್ತ್ರ, ರಸಾಯಣ ಶಾಸ್ತ್ರ ಹಾಗೂ ಸಂಸ್ಕøತದಲ್ಲಿ 100ಕ್ಕೆ 99 ಅಂಕ ಹಾಗೂ ಇಂಗ್ಲಿಷ್ ನಲ್ಲಿ 95 ಅಂಕ ಗಳಿಸಿದ್ದಾರೆ.
ಇವರು ಕಳಸ ಜೆಇಎಂ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯಲ್ಲಿ ಶೇ 99.68(623) ಅಂಕ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇವರು ಸಂಸೆ ಐಟಿಐ ಕಾಲೇಜಿನ ಪ್ರಾದ್ಯಾಪಕರಾದ ರಮೇಶ್ ಎಸ್ ಹಾಗೂ ಗಂಗನಕೊಡಿಗೆ ಶಿಕ್ಷಕಿ ಶಕುಂತಳ ಇವರ ಪುತ್ರರಾಗಿದ್ದಾರೆ.
ಇವರ ಈ ಸಾಧನೆಗೆ ಕಳಸ ತಾಲ್ಲೂಕಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
