ಕಳಸ ಲೈವ್ ವರದಿ
ಹೆಮ್ಮಕ್ಕಿ ಶ್ರೀ ಭದ್ರಾಕಾಳಿ ಹಾಗೂ ಶ್ರೀ ಸೋಮೇಶ್ವರಸ್ವಾಮಿಗೆ ಮೇ 2 ಮತ್ತು 3 ರಂದು ಜೀರ್ಣ ಅಷ್ಠಬಂಧ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಮೇ 2 ರಂದು ಬೆಳಿಗ್ಗೆ ಶ್ರೀ ಭದ್ರಕಾಳಿ ಅಮ್ಮನವರ ಸನ್ನಿಧಿಯಲ್ಲಿ ಬ್ರಹ್ಮ ಕಲಶ ಸ್ಥಾಪನೆ, ಕಲಾತತ್ವ ಹೋಮ, ಚಂಡಿಕಾಹೋಮ, 11-45ಕ್ಕೆ ಬ್ರಹ್ಮಕಲಶಾಭಿಷೇಕ, ಪ್ರಸನ್ನಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಮೇ 3ರಂದು ಶ್ರೀಸೋಮೇಶ್ವರಸ್ವಾಮಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾತತ್ವಹೋಮ, ರುದ್ರಹೋಮ, 11-45ಕ್ಕೆ ಬ್ರಹ್ಮಕಲಶಾಭಿಷೇಕ, ಪ್ರಸನ್ನಪೂಜೆ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ.

