
ಕಳಸ ಲೈವ್ ವರದಿ
ಬಾಳೆಹೊಳೆ ಚನ್ನಕೇಶವ ದೇವಸ್ಥಾನದ ಪರಿವಾರ ದೇವರಾದ ದುರ್ಗಾಪರಮೇಶ್ವರಿ ಅಮ್ಮನವರ ಬಳಿ ಇದ್ದ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳ್ಳತನ ಮಾಡಲಾಗಿದೆ.
ಶನಿವಾರ ರಾತ್ರಿ ಕಳ್ಳತನವಾಗಿದ್ದು ದೇವಸ್ಥಾನದ ಅರ್ಚಕರು ಭಾನುವಾರ ಬೆಳಿಗ್ಗೆ ಪೂಜೆಗೆಂದು ಬಂದಾಗ ಹುಂಡಿ ಬೀಗ ಮುರಿದು ಹಣ ಕಳವಾಗಿದ್ದು ಗಮನಕ್ಕೆ ಬಂದಿದೆ.
ಈ ಬಗ್ಗೆ ಕಳಸ ಪೊಲಿಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

