ಕಳಸ ಲೈವ್ ವರದಿ
ಶ್ರೀ ಹೊಸದೇವರ ಚಾವಡಿ ದೈವಸ್ಥಾನದಲ್ಲಿ ಮಂಗಳವಾರ ಮುದ್ರೆ ಪೂಜೆ ನಡೆಯಲಿದೆ.
ವರ್ಷ ಬಿಟ್ಟು ವರ್ಷ ಮಾರಿ ಪೂಜೆ ಹಾಗೂ ಕೋಲನಡಿಯಲ್ಲಿದ್ದು ಈ ವರ್ಷ ಕೋಲ ಅಥವಾ ನೇಮೋತ್ಸವ ಇಲ್ಲದಿದ್ದ ಕಾರಣ ಮುದ್ರೆ ಪೂಜೆ ನಡೆಯಲಿದೆ.
ಮುದ್ರೆ ಪೂಜೆಯಲ್ಲಿ ಚರು ಹಾಗೂ ಅವಲಕ್ಕಿ ದೈವಗಳಿಗೆ ನೈವಿದ್ಯ.. ದೈವದ ಬಂಡಾರವು ಬಂಡಾರ ಮನೆಯಿಂದ ಹೊರಟು ಕಲಶೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಕಲಶೇಶ್ವರನ ಅಪ್ಪಣೆಯೊಂದಿಗೆ ಹೊಸದೇವರ ಚಾವಡಿಗೆ ತೆರಳಿ ಒಕ್ಕಲಾಗುವುದು.
ಸಂಜೆ 5.30ಕ್ಕೆ ಪೂಜೆಯು ಆರಂಭವಾಗಿ 7 ಗಂಟೆಗೆ ಹೊಸದೇವರ ಚಾವಡಿಯಲ್ಲಿ ಹಾಗೂ ಬೆಲ್ಲಾರಮ್ಮ ದೇವಸ್ಥಾನದಲ್ಲಿ ಗಣವಿರುತ್ತದೆ. ರಾತ್ರಿ ಗಣಕಲಾವಧಿಯೇ ಅಂತ್ಯಕ್ಕೆ ಭಂಡಾರವು ಗುತ್ಯಮ್ಮ ದೇವಸ್ಥಾನಕ್ಕೆ ಬಂದು ಅಲ್ಲಿ ಮಹಾಮಂಗಳಾರತಿ ಆಗಿ ವಾಪಸ್ಸು ಭಂಡಾರದ ಮನೆಗೆ ತೆರಳುವುದೆಂದು ವಿಶಾಲ್ ನೋಟದ ತಿಳಿಸಿದ್ದಾರೆ.
