ಕಳಸ ಲೈವ್ ವರದಿ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಲೈಂಗಿಕ ವಿಷಯಗಳು ಸಂಬಂಧಿಸಿದ ವಿಡಿಯೋಗಳನ್ನು, ತನ್ನ ಇನ್ಸ್ಟಾಗ್ರಾಮ್ ಫೇಸ್ಬುಕ್ ಟೆಲಿಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ನಗ್ನ, ಅರೆ ನಗ್ನ ಹಾಗೂ ಅಶ್ಲೀಲ ವಿಡಿಯೋಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ, ಹಾಗೂ ಅವುಗಳಿಗೆ ಶೀರ್ಷಿಕೆಯಾಗಿ ಕಾಮ ಪ್ರಚೋದಕ ವಾಕ್ಯಗಳನ್ನು ಹಾಕಿ, ಮಹಿಳೆಯರ ಖಾಸಗಿತನಕ್ಕೆ ಹಾಗೂ ಗೌರವಕ್ಕೆ ಧಕ್ಕೆ ಉಂಟುಮಾಡುವಂತಹ ವಾಕ್ಯಗಳನ್ನು ಹಾಕಿರುವ ಗ್ರೂಪ್ ಅಡ್ಮಿನ್ ಕಳಸ ತಾಲೂಕು ಸಂಸೆ ಗ್ರಾಮದ ಪ್ರಜ್ವಲ್ ಎಂಬುವವರ ಮೇಲೆ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಕಲಂ 67, 67 ಎ ಮಾಹಿತಿ ತಂತ್ರಜ್ಞಾನ ಕಾಯ್ದೆ 2008, ಹಾಗೂ ಕಲಂ 6 ಇಂಡಿಸೆಂಟ್ ರೆಪ್ರೆಸೆಂಟೇಷನ್ ಆಫ್ ವುಮನ್ ಆಕ್ಟ್ 1986 ಅನ್ವಯ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪ್ರಜ್ವಲ್ ನನ್ನು ವಶಕ್ಕೆ ಪಡೆದು, ಮೂಡಿಗೆರೆ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿರುತ್ತಾರೆ.

