
ಕಳಸ ಲೈವ್ ವರದಿ
ಜೆಸಿಐ ವಲಯ 14 ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಕಳಸ ಜೇಸಿ ಘಟಕವು ಹಲವಾರು ಪ್ರಶಸ್ತಿ ಗಳನ್ನು ಗಳಿಸಿದೆ.
ಭಾನುವಾರ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಹಿತು.
ಸತತ ಮೂರನೇ ಬಾರಿಗೆ ಔಟ್ ಸ್ಟ್ಯಾಂಡಿಗ್ ಘಟಕಾಧಿಕಾರಿ ಪ್ರಶಸ್ತಿಯನ್ನು ಕಳಸ ಜೇಸಿ ಘಟಕದ ಕಾರ್ಯದರ್ಶಿಗಳಾದ ಸುಧಾಕರ್ ಪಡೆದುಕೊಂಡರು. ಔಟ್ ಸ್ಟ್ಯಾಂಡಿಗ್ ಪ್ರೆಸಿಡೆಂಟ್ ಪುರಸ್ಕಾರವನ್ನು ಕಳಸ ಜೇಸಿ ಘಟಕದ ಪಾಲಾಗಿದ್ದು, ಜೊತೆಗೆ ಗೋಲ್ಡನ್ ಕಾಲರ್ ಪ್ರೆಸಿಡೆಂಟ್ ಪುರಸ್ಕಾರವನ್ನು ಕೂಡ ಕಳಸ ಜೇಸಿ ಘಟಕವು ಪಡೆದುಕೊಂಡಿದೆ. ಅಲ್ಲದೇ ವಿವಿಧ ವಿಭಾಗಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಕಾರಣಕ್ಕೆ ಹತ್ತು ಹಲವಾರು ಪುರಸ್ಕಾರವನ್ನು ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಕಳಸ ಜೆಸಿಐ ಘಟಕದ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಸುಧಾಕರ್, ನಿಖಟಪೂರ್ವ ಅಧ್ಯಕ್ಷ ಚರಣ್, ಜೆಸಿಐ ರಾಷ್ಟ್ರೀಯ ತರಬೇತುದಾರ ಹೆಚ್.ಆರ್.ಪ್ರಶಾಂತ್, ಸದಸ್ಯ ನಜೀರ್ ಇದ್ದರು.